ಕೋಲ್ಕತ್ತಾ(ಏ.19): ಪ.ಬಂಗಾಳದಲ್ಲಿ ಲೋಕಸಭೆ ಚುನಾವಣೆಯ ಮೂಲಕ ಕಮಲ ಅರಳಿಸುವ ಇರಾದೆಯಲ್ಲಿರುವ ಬಿಜೆಪಿಗೆ ಸಿಎಂ ಮಮತಾ ಬ್ಯಾನರ್ಜಿ ಟಾಂಗ್ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ರಾಜ್ಯದಲ್ಲಿ ದೊಡ್ಡ ರಸಗುಲ್ಲಾ(ಸೊನ್ನೆ) ಸಿಗಲಿದೆ ಎಂದು ಮಮತಾ ಕುಹುಕವಾಡಿದ್ದಾರೆ. 

ಬಿಜೆಪಿ ಗೆಲುವು ಕೇಂದ್ರ ಮತ್ತ ರಾಜ್ಯದಲ್ಲಿ  ಪಕ್ಷಕ್ಕೆ ಲಡ್ಡೂ ಸಿಕ್ಕಂತೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ, ಮಮತಾ ಮೇಲಿನಂತೆ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಲಡ್ಡೂ ಬದಲಾಗಿ ದೊಡ್ಡ ರಸಗುಲ್ಲಾ ಸಿಗಲಿದೆ ಎಂದು ಮಮತಾ ಕಿಚಾಯಿಸಿದ್ದು, ರಾಜ್ಯದ ಮತದಾರ ಕೋಮುವಾದಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾನೆ ಎಂದು ಹರಿಹಾಯ್ದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.