ಕೋಲ್ಕತಾ[ಏ.28]: ಪಕ್ಷದ ಗಣ್ಯಾತಿಗಣ್ಯರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸುವುದು ಸಾಮಾನ್ಯ. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ, ತಮ್ಮ ಪುತ್ಥಳಿಗಳನ್ನೇ ಪ್ರಚಾರಕ್ಕೆ ಕಳುಹಿಸಿಕೊಡುವ ಮೂಲಕ ಈ ಚುನಾವಣೆಯಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಡೈಮಂಡ್‌ ಹಾರ್ಬರ್‌ ಕ್ಷೇತ್ರದ ಸಂಸದನಾಗಿರುವ ಅಭಿಷೇಕ್‌ ತರೆದ ಜೀಪಿನಲ್ಲಿ ತಮ್ಮ ಮೂರ್ತಿಯನ್ನಿಟ್ಟು ಕಾರ್ಯಕರ್ತರು ಪ್ರಚಾರ ನಡೆಸುವಂತೆ ಸಲಹೆ ನೀಡಿ ಅದನ್ನು ಕಾರ್ಯಗತಗೊಳಿಸಿದ್ದಾರೆ. ಹೀಗಾಗಿ ಅವರ ಕ್ಷೇತ್ರದಲ್ಲಿ ಇದೀಗ ಅಭಿಷೇಕ್‌ ಬ್ಯಾನರ್ಜಿ ಅವರ ಮೂರ್ತಿಗಳೇ ಭರ್ಜರಿ ಪ್ರಚಾರದ ಸರಕುಗಳಾಗಿದ್ದು, ಅದನ್ನು ಕಂಡೊಡನೆ ಜನ ಕೂಡ ಘೋಷಣೆ ಕೂಗಿ ಸ್ವಾಗತಿಸುತ್ತಿದ್ದಾರೆ.

ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.