ಕಲಬುರಗಿ: ಮೇ 23 ರಂದು ಲೋಕಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಇಡೀ ದೇಶದಲ್ಲೇ ಭೂಕಂಪನವಾಗಲಿದೆ. ಇನ್ನು ರಾಜ್ಯದಲ್ಲಂತೂ ಹೆಚ್ಚಿನ ಕಂಪನ ಶುರುವಾಗಲಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭವಿಷ್ಯ ನುಡಿದಿದ್ದಾರೆ.

ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆಯವರಿಗೆ ನಾವು ಕೈ ಕೊಟ್ಟಿಲ್ಲ. ಪುತ್ರ ವ್ಯಾಮೋಹದಲ್ಲಿ ಅವರೇ ನಮಗೆಲ್ಲ ಕೈಕೊಟ್ಟಿದ್ದಾರೆ. 

ಪ್ರಿಯಾಂಕ್‌ಗೆ ಲೈನ್ ಕ್ಲಿಯರ್ ಮಾಡಲು ಹೋಗಿ ಹೈ.ಕ. ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿ ತಲುಪುವಂತೆ ಮಾಡಿದ್ದಾರೆ. ಅನೇಕರು ಒಬಿಸಿ ಮುಖಂಡರು, ಮೇಲ್ವರ್ಗದವರು ತಾವಾಗಿಯೇ ಪಕ್ಷ ಬಿಟ್ಟು ಹೋಗುವಂತೆ ಮಾಡಿದ್ದಾರೆ ಎಂದು ದೂರಿದರು.