ಕೇಸರಿಮಯವಾಗುವತ್ತ ಹೆಜ್ಜೆ ಇರಿಸಿದ ಮಹಾರಷ್ಟ್ರ| ಬಿಜೆಪಿ-ಶಿವಸೇನೆ ಮೈತ್ರಿಗೆ ಭಾರೀ ಮುನ್ನಡೆ| ಒಟ್ಟು 48 ಲೋಕಸಭಾ ಚುನಾವಣೆಗಳ ಪೈಕಿ 38ರಲ್ಲಿ ಮೈತ್ರಿಪಕ್ಷ ಮುನ್ನಡೆ| ಕಾಂಗ್ರೆಸ್-ಎನ್‌ಸಿಪಿಗೆ ಕೇವಲ 9 ಸ್ಥಾನಗಳಲ್ಲಿ ಮುನ್ನಡೆ|

ಮುಂಬೈ(ಮೇ.23): ಪಕ್ಕದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಹವಾ ಜೋರಾಗಿದ್ದು, ಇಡೀ ರಾಜ್ಯ ಕೇಸರಿಮಯವಾಗುವತ್ತ ಹೆಜ್ಜೆ ಇಟ್ಟಿದೆ. ಒಟ್ಟು 48 ಲೋಕಸಭಾ ಕ್ಷೇತ್ರಗಳ ಪೈಕಿ 38 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಶಿವಸೇನೆ ಮುನ್ನಡೆ ಸಾಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್ ಮತ್ತು ಎನ್‌ಸಿಪಿ ಕೇವಲ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಯಾವುದೇ ಮೈತ್ರಿಗೆ ಸೇರದ ಓರ್ವ ಅಭ್ಯರ್ಥಿ ಕೂಡ ಮುನ್ನಡೆಯಲ್ಲಿದ್ದಾರೆ. ಅಲ್ಲದೇ ರಾಜಧಾಮಿ ಮುಂಬೈನ ಆರೂ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮುನ್ನಡೆ ಸಾಧಿಸಿರುವುದು ವಿಶೇಷ.

ಕಳೆದ(2014) ಲೋಕಸಭಾ ಚುನಾವಣೆಯಲ್ಲಿ ಒಟ್ಟು 23 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಾಚುವ ಸಾಧ್ಯತೆ ನಿಚ್ಚಳವಾಗಿದೆ. ಅದರಂತೆ ಕಳೆದ ಬಾರಿ 18 ಸ್ಥಾನಗಳನ್ನು ಗಳಿಸಿದ್ದ ಶಿವಸೇನೆ ಈ ಬಾರಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಆದರೆ ಕಳೆದ ಬಾರಿಗಿಂತ ಕಳಪೆ ಸಾಧನೆ ಮಾಡುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಮತ್ತು ಎನ್‌ಸಿಪಿ, ಎರಡಂಕಿ ದಾಟುವ ಸಾಧ್ಯತೆಯೂ ಕ್ಷೀಣಿಸಿದೆ ಎಂದು ಅಂದಾಜಿಸಲಾಗಿದೆ.