ಮಂಡ್ಯ : ಲೋಕಸಭಾ ಮಹಾ ಸಮರ ಮುಕ್ತಾಯವಾಗಿದೆ. ಅಭ್ಯರ್ಥಿಗಳು ಚುನಾವಣಾ ಫಲಿತಾಂಶಕ್ಕಾಗಿ ಕಾದಿದ್ದಾರೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಈಗಾಗಲೇ ಹಲವು ರೀತಿಯ ಭವಿಷ್ಯ, ಜ್ಯೋತಿಷ್ಯದ ಮೊರೆ ಹೋಗಿದ್ದಾರೆ. 

ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಭವಿಷ್ಯದ ಬಗ್ಗೆ ಮದ್ದೂರವ್ವ ಭವಿಷ್ಯ ಹೇಳಿದಳಾ?. ಈ ಭವಿಷ್ಯದ ಪ್ರಕಾರ ನಿಖಿಲ್ ಸೋಲುತ್ತಾರಾ ಎನ್ನುವ ಚರ್ಚೆ ಹುಟ್ಟಿದೆ. 

ನಿಖಿಲ್ ಗೆಲುವಿಗಾಗಿ ದೇವೇಗೌಡರ ಪುತ್ರ ಡಾ. ರಮೇಶ್ ಅವರ ಪತ್ನಿ ಸೌಮ್ಯಾ ರಮೇಶ್ ಹರಕೆ ಹೊತ್ತಿದ್ದರು. ಆಡನ್ನು ತೆಗೆದುಕೊಂಡು ಹರಕೆ ತೀರಿಸಲು ಮದ್ದೂರವ್ವ  ದೇವಾಲಯದ ಬಳಿ ತೆರಳಿದಾಗ ಆಡು ತಲೆ ಆಡಿಸಲು ಹಿಂದೇಟು ಹಾಕಿದೆ.

ಸೌಮ್ಯಾ ರಮೇಶ್ ಅವರು ಗಂಟೆ ಗಟ್ಟಲೇ ಸ್ಥಳದಲ್ಲಿ ಕಾದರೂ ಕೂಡ ಆಡು ತಲೆ ಆಡಿಸದೇ ನಿಂತಿದೆ. ಇದರಿಂದ ಆತಂಕಕೊಂಡಿದ್ದಾರೆ. ಮತ್ತೊಂದು ಆಡು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸುವುದಾಗಿ ಹೇಳಿ ವಾಪಸಾಗಿದ್ದಾರೆ.