ಶಿವಮೊಗ್ಗ : ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾತರರಾಗಿದ್ದಾರೆ.  ಇದೇ ವೇಳೆ ಶಿವಮೊಗ್ಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ  ಮಧು ಬಂಗಾರಪ್ಪ ಗೆಲುವು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಎಚ್.ಎಸ್. ಸುಂದರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ಮಧು ಬಂಗಾರಪ್ಪ ಪರವಾಗಿ ಉತ್ತಮ ಫಲಿತಾಂಶ ಬರಲಿದೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಮೀಕ್ಷೆ ನಡೆಸಿದ್ದೇವೆ ಈ ವೇಳೆ ಅಧಿಕ ಅಂತರದಲ್ಲಿ ಮಧು ಗೆಲುವು ಖಚಿತವಾಗಿದೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಆಭ್ಯರ್ಥಿ ಮಧು ಬಂಗಾರಪ್ಪ  72 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಗೆ 5 ಸಾವಿರ ಮತಗಳ ಲೀಡ್,  ಶಿವಮೊಗ್ಗ ಗ್ರಾಮಾಂತರ ದಲ್ಲಿ ಮೈತ್ರಿಗೆ 12 ಸಾವಿರ ಮತಗಳ ಲೀಡ್ ದೊರೆಯಲಿದೆ.  ಶಿಕಾರಿಪುರದಲ್ಲಿ ಬಿಜೆಪಿ ಗೆ 6 ಸಾವಿರ ಮತಗಳ ಲೀಡ್, ತೀರ್ಥಹಳ್ಳಿ ಯಲ್ಲಿ ಮೈತ್ರಿಗೆ 13 ಸಾವಿರ ಮತಗಳ ಲೀಡ್, ಭದ್ರಾವತಿ ಯಲ್ಲಿ ಮೈತ್ರಿಗೆ 30 ಸಾವಿರ ಮತಗಳ ಲೀಡ್ ದೊರೆಯುವ ವಿಶ್ವಾಸವಿದೆ. 

ಇನ್ನು ಸೊರಬ ದಲ್ಲಿ ಮೈತ್ರಿ, ಗೆ 18 ಸಾವಿರ ಮತಗಳ ಲೀಡ್, ಸಾಗರದಲ್ಲಿ ಮೈತ್ರಿಗೆ 15 ಸಾವಿರ ಮತಗಳ ಲೀಡ್, ಬೈಂದೂರುನಲ್ಲಿ 5 ಸಾವಿರ ಮತಗಳ ಲೀಡ್  ದೊರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ  ಬಿ.ವೈ ರಾಘವೇಂದ್ರ, ಮಧು ಬಂಗಾರಪ್ಪ ವಿರುದ್ಧ  45 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಗಿಂತ 72 ಸಾವಿರ ಮತಗಳ ಅಂತರಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.