ಮಂಗಳೂರು[ಏ.15]: ಮಂಗಳೂರಿನ‌ ನೆಹರು ಮೈದಾನದಲ್ಲಿ ಶನಿವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತರಾತುರಿಯಲ್ಲಿ ಭಾನುವಾರ ಆಯೋಜಿಸಿದ ಸಮಾವೇಶ ಪ್ಲಾಫ್ ಶೋ ಆಗಿದೆ..! ಮಂಗಳೂರಿನ ಕದ್ರಿ ಮೈದಾನದಲ್ಲಿ ಶನಿವಾರ ಸಂಜೆ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರಿಲ್ಲದೇ ಸಮಾವೇಶ ಬಿಕೋ ಎನಿಸಿದೆ. 

ಶನಿವಾರ ಸಂಜೆ 6.30ಕ್ಕೆ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ ಕದ್ರಿ ಮೈದಾನದ ಸಭೆಯಲ್ಲಿ ಮಾತನಾಡಿ, ಬಳಿಕ ಮುಡಿಪು ಸಭೆಗೆ ತೆರಳಬೇಕಿತ್ತು. ಆದರೆ ಕದ್ರಿಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳ ಇದ್ದಿದ್ದನ್ನು ಮನಗಂಡು ಸಚಿವ ಯು. ಟಿ ಖಾದರ್ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಮುಡಿಪುವಿಗೆ ಶತ್ರುಘ್ನ ಸಿನ್ಹಾ ಅವರನ್ನು ಕರೆದೊಯ್ದಿದ್ದರು. ಅಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.