ನವದೆಹಲಿ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದಲ್ಲಿ ಭಾರೀ ಜಯಗಳಿಸಿದೆ. 

ಬಿಜೆಪಿ ನೇತೃತ್ವದ NDA 353 ಸ್ಥಾನಗಳಲ್ಲಿ ಜಯಗಳಿಸಿದ್ದು, ಮತ್ತೊಮ್ಮೆ ಮೋದಿ ಅಲೆ ದೇಶದಲ್ಲಿ ಬೀಸಿದೆ. 

ಇದೇ ವೇಳೆ ಸದಾ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ನಟಿ ಸ್ವರಾ ಭಾಸ್ಕರ್ ಈ ಗೆಲುವಿನ ಬಗ್ಗೆ ಅಭಿನಂದನೆ ತಿಳಿಸಿದ್ದಾರೆ. 

 

ಭರ್ಜರಿ ಜಯಭೇರಿಗೆ ಅಭಿನಂದನೆಗಳು. ಪ್ರಜಾಪ್ರಭುತ್ವದಲ್ಲಿ ಜನ ನೀಡಿದ ತೀರ್ಪನ್ನು ನಾವು ಗೌರವಿಸುತ್ತೇವೆ.   ಇದೇ ವೇಳೆ ದೇಶದ ಜನತೆಗೆ ಅವರು ನೀಡಿದ ಭರವಸೆಯನ್ನು ಈಡೇರಿಸುವ ವಿಶ್ವಾಸವಿದೆ. ಅವರು ಭಾರತೀಯ ಪ್ರಧಾನಿ. ಯಾರು ಅವರಿಗೆ ಮತ ನೀಡಲಿಲ್ಲವೋ ಅವರಿಗೂ ನರೇಂದ್ರ ಮೋದಿಯೇ ಪ್ರಧಾನಿ ಎಂದು ಹೇಳಿದ್ದಾರೆ. 

ಈ ನಟಿ ಪ್ರಚಾರ ಮಾಡಿದ ಅಭ್ಯರ್ಥಿಗಳಿಗೆಲ್ಲಾ ಸೋಲೇ ಸೋಲು!