ದೇಶದಲ್ಲಿ ಕಳೆದ 38 ದಿನಗಳಿಂದ ನಡೆಯುತ್ತಿದ್ದ ಪ್ರಜಾಪ್ರಭುತ್ವದ ಹಬ್ಬಕ್ಕೆ ತೆರೆದಿದ್ದು, ಕೇಂದ್ರದಲ್ಲಿ ಅಧಿಕಾರವನ್ನು ಯಾರು ಸ್ಥಾಪಿಸಲಿದ್ದಾರೆ? ಭಾರತದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ? ಟೈಮ್ಸ್ ನೌ ವಿಎಂಆರ್ ಸಮೀಕ್ಷೆ ಏನು ಹೇಳುತ್ತೆ ಇಲ್ಲಿದೆ ನೋಡಿ.

ನವದೆಹಲಿ, (ಮೇ.19): ದೇಶದಲ್ಲಿ ಕಳೆದ 38 ದಿನಗಳಿಂದ ನಡೆಯುತ್ತಿದ್ದ ಪ್ರಜಾಪ್ರಭುತ್ವದ ಹಬ್ಬಕ್ಕೆ ತೆರೆ ಬಿದ್ದಿದೆ. ಏಪ್ರಿಲ್​ 11 ರಿಂದ ಆರಂಭವಾಗಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅದ್ರಂತೆ ಇಂದಿಗೆ ಲೋಕಸಮರ ಅಂತ್ಯಗೊಂಡಿದ್ದು, ಚುನಾವಣೆ ಫಲಿತಾಂಶಕ್ಕಾಗಿ ಇಡೀ ವಿಶ್ವವೇ ಬೆರಗುಗಣ್ಣನಿಂದ ಕಾಯುತ್ತಿದೆ. 

ಇದರ ಮಧ್ಯೆ ಚುನವಣೋತ್ತರ ಸಮೀಕ್ಷಗಳ ನೋಡುವ ಸಮಯ. ಅದರಂತೆ ಟೈಮ್ಸ್ ನೌ ಹಾಗೂ ವಿಎಂಆರ್ ಎಕ್ಸಿಟ್ ಪೋಲ್ ಪ್ರಕಟವಾಗಿದ್ದು, ಎನ್ಡಿಎ ಸ್ಪಷ್ಟ ಬಹುಮತ ಪಡೆಯಲಿದ್ದು, ಮೋದಿ ಮತ್ತೊಮ್ಮೆ ಎನ್ನುವ ಭವಿಷ್ಯವನ್ನು ಹೇಳಿದೆ.

ಟೈಮ್ಸ್​ ನೌ ಹಾಗೂ ವಿಎಂಆರ್​ ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ದೇಶದಲ್ಲಿ ಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಮೋದಿ ನೇತೃತ್ವದ ಎನ್​ಡಿಎ 306 ಸ್ಥಾನಗಳಿಸಲಿದೆಯಂತೆ.

ಇನ್ನು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ 2 ಹಂತದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 21 ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್​- ಜೆಡಿಎಸ್​ಮೈತ್ರಿಗೆ ಟಕ್ಕರ್​ ಕೊಡಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. 

ಮೈತ್ರಿ ಯೊಂದಿಗೆ ಚುನಾವಣೆ ಎದುರಿಸಿದ್ದ ಕಾಂಗ್ರೆಸ್​-ಜೆಡಿಎಸ್ ​ಕೇವಲ 07 ಸ್ಥಾನಗಳಲ್ಲಿ ಜಯ ಗಳಿಸಲಿದೆ. ಇನ್ನು, ಭಾರೀ ಕುತೂಹಲ ಮೂಡಿಸಿದ್ದ ಮಂಡ್ಯ ಕ್ಷೇತ್ರ ಜೆಡಿಎಸ್​ ಪಾಲಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

Scroll to load tweet…
Scroll to load tweet…

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.