ನರೇಂದ್ರ ಮೋದಿ ಮಿತ್ರಕೂಟ ಎನ್ಡಿಎ ಗೆಲ್ಲೋದೆಷ್ಟು..?| ರಾಹುಲ್ ಮಹಾಘಟ್ಬಂಧನ್ ಗಳಿಸೋ ಸೀಟೆಷ್ಟು..?| ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಮತದಾನೋತ್ತರ ಸಮೀಕ್ಷೆಯಲ್ಲಿ ಸಿಗಲಿದೆ ದೇಶದ ಭವಿಷ್ಯದ ಅಂದಾಜು ಚಿತ್ರಣ.
ನವದೆಹಲಿ, [ಮೇ.19]: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ 2019ರ ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಕ್ಕೆ ತೆರೆ ಬಿದ್ದಿದೆ. ಅದ್ರಂತೆ ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಂಸ್ಥೆಗಳು ಎಕ್ಸಿಟ್ ಪೋಲ್ ಸಂಸ್ಥೆಗಳು ಸರ್ವೇ ನಡೆಸಿದ್ದವು.
ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಡೆದ 542 ಕ್ಷೇತ್ರಗಳ ಮತದಾನದ ವೇಳೆ ಒಟ್ಟು 7 ಲಕ್ಷಕ್ಕೂ ಅಧಿಕ ಮಂದಿಯನ್ನ ಸಂದರ್ಶಿಸಿ ಸರ್ವೇ ನಡೆಸಿತ್ತು. ಸರ್ವೇ ಹೇಳುವ ಪ್ರಕಾರ ಈ ಬಾರಿಯೂ ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡೋದು ಪಕ್ಕಾ ಆಗಿದೆ.
India Today-Axis My India Exit Poll
ಎನ್ಎಡಿಎ-287
ಯುಪಿಎ-128
ಇತರೆ-127
542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಂಸ್ಥೆಗಳು ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ರಚನೆ ಮಾಡೋದಾಗಿ ಹೇಳಿದೆ.
ಇನ್ನು ಸರ್ಕಾರ ರಚನೆ ಮಾಡಲು 272 ಸಂಖ್ಯಾ ಬಲ ಬೇಕಾಗಿದೆ. ಸರ್ವೇ ಪ್ರಕಾರ ಸುಲಭವಾಗಿಯೇ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಗ್ಯಾರಂಟಿ ಎಂದು ಸರ್ವೇ ಹೇಳಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
