ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಬೆನ್ನಲ್ಲೇ ಜಾಗ್ವಾರ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಾಡಿದ ಮಾತಿನ ವಿಡಿಯೋ ವೈರಲ್ ಆಗಿತ್ತು. ನಿಖಿಲ್ ಎಲ್ಲಿದಿಯಪ್ಪಾ ಎಂದ ಡೈಲಾಗ್ ಸಖತ್ ಫೇಮಸ್ ಆಗಿತ್ತು. 

ಬೆಂಗಳೂರು : ‘ಜಾಗ್ವಾರ್’ ಚಿತ್ರದ ಆಡಿಯೋ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ ‘ನಿಖಿಲ್ ಎಲ್ಲಿದೀಯಪ್ಪಾ’ ಡೈಲಾಗ್ ಅದೆಷ್ಟು ಜನಪ್ರಿಯಗೊಂಡಿದೆ ಎಂದರೆ, ಅದೀ ಗ ವಿಶ್ವದ ನಂ.1 ಸ್ಲೋಗನ್ ಎನಿಸಿಕೊಂಡಿದೆ. 

ಟ್ರಾಲ್‌ಗಳು ಅಂತರ್‌ಜಾಲ ಲೋಕವನ್ನು ಆವರಿಸಿ ಕೊಂಡಿವೆ. ಇದರಿಂದ ಸ್ಫೂರ್ತಿ ಪಡೆದ ಬಿಗ್ ಬಜೆಟ್ ಚಿತ್ರಗಳ ಹೂಡಿಕೆದಾರರೊಬ್ಬರು ‘ಎಲ್ಲಿದ್ದೀಯಪ್ಪಾ’ ಟೈಟ ಲ್‌ನ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. 

ಅದನ್ನು ಕನ್ನಡ ಸೇರಿ ದಕ್ಷಿಣ ಭಾರತೀಯ ಭಾಷೆಗಳಷ್ಟೇ ಅಲ್ಲದೆ ಹಿಂದಿ, ಇಂಗ್ಲಿಷ್ ನಲ್ಲೂ ಬಿಡುಗಡೆಗೆ ಮುಂದಾಗಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಗೆದ್ದರೆ, ಬೇರೊಬ್ಬ ನಟನನ್ನು ಹೀರೋ ಮಾಡಲಾಗುವುದು. ಸೋತರೆ ಅವರನ್ನೇ ನಾಯಕನಾಗು ವಂತೆ ಕೋರಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಹೂಡಿಕೆದಾರರು ಸುಳ್‌ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.