ಬೆಂಗಳೂರು[ಮಾ.16]: ಮತ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ಸೇರ್ಪಡೆಗೊಳಿಸಲು ಕೆಲವೇ ಗಂಟೆಗಳು ಬಾಕಿ ಇವೆ. ಹೌದಯು ಚುನಾವಣಾ ಆಯೋಗವು ಮಾ. 16ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮಾ.16ರ ವರೆಗೂ ಅವಕಾಶ ಕಲ್ಪಿಸಿದೆ.

ನಿಯಮಗಳ ಅನ್ವಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಅವಕಾಶವಿಲ್ಲ. ಅಲ್ಲದೇ ನಾಮಪತ್ರ ಸಲ್ಲಿಕೆಯ 10 ದಿನ ಮೊದಲು ನೋಂದಾವಣೆಯ್ನನು ಸ್ಥಗಿತಗೊಳಿಸಬೇಕು. ಇನ್ನು ಬೆಂಗಳೂರಿನಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಲು ಮಾ. 26 ಕೊನರಯ ದಿನಾಂಕವಾಗಿದೆ. ಇದರ ಅನ್ವಯ ಬೆಂಗಳೂರಿನಲ್ಲಿ ವೋಟರ್ಸ್ ಲಿಸ್ಟ್ ಗೆ ಹೆಸರು ಸೇರಿಸಲು ಮಾ.16ರವರೆಗಿನ ಗಡುವು ನೀಡಲಾಗಿದೆ. 

ಇನ್ನು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುವುದನ್ನು  https://electoralsearch.in ವೆಬ್ಸೈಟಿನಲ್ಲೂ ಪರಿಶೀಲಿಸಬಹುದಾಗಿದೆ. 

ಈ ಬಾರಿ ಎಪಿಕ್ ಕಾರ್ಡ್ ದುರ್ಬಳಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ದಿನ ಖಾಸಗಿ ಕಂಪನಿಗಳು ಕಡ್ಡಾಯವಾಗಿ ರಜೆ ಘೋಷಿಸಬೇಕು. ಇಲ್ಲದಿದ್ದರೆ ಆ ಕಂಪನಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಅವಕಾವಿದೆ. ಚುನಾವಣೆಗೆ ಸಂಬಂಧಿಸಿದ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ‘ಸಿ ಮಿಚಿಲ್’ ಆ್ಯಪ್ ಮೂಲಕ ಮಾಹಿತಿ ನೀಡಬಹುದು.

ಫೋಟೋಗಳಿದ್ದರೆ ಹಾಕಬಹುದು. ಅದನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಹೇಳಿದರು.