ಚಾಮರಾಜನಗರ[ಮಾ. 14]  ಚಾಮರಾಜನಗರ ಲೋಕಸಭಾ ಚುನಾವಣೆ ಕಣ ರಂಗೇರಿದ್ದು ಚುನಾವಣೆಗೆ ಸ್ಪರ್ಧಿಸುವಂತೆ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರ ಮೇಲೆ ಬೆಂಬಲಿಗರು ಒತ್ತಡ ಹೇರಿದ್ದಾರೆ.

 ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಬಂದಿದೆ.  ಮೈಸೂರಿನ ಜಯಲಕ್ಷ್ಮೀಪುರಂನ ಪ್ರಸಾದ್ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿ ಒತ್ತಡ ಹೇರಿದ್ದಾರೆ. 

ಉಡುಪಿ ಟಿಕೆಟ್ ಬಗ್ಗೆ ಸುಳಿವು ಕೊಟ್ಟ ಯಡಿಯೂರಪ್ಪ!

ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಸೋಲಿಸಲು ಪ್ರಭಲ ಅಸ್ತ್ರವಾಗಿರುವ ಪ್ರಸಾದ್.  ಹೀಗಾಗಿ ನೀವೇ ಸ್ಪರ್ಧೆ ಮಾಡಿ ಎಂದು ಅಭಿಮಾನಿಗಳ ಒತ್ತಾಯ ಹೇರಿದ್ದಾರೆ. ನೀವು ನಿಂತರೆ ಗೆದ್ದೇ ಗೆಲ್ಲುತ್ತೀರಿ.  ನಿಮ್ಮನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮಅ ಹೆಗಲಿಗೆ ಬಿಡಿ.  ದಯವಿಟ್ಟು ಅಖಾಡಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ.