ದಾವ​ಣ​ಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಬ​ಲಿಸಿ, ಹೇಳಿ​ಕೆ​ ನೀಡಿ​ರು​ವುದೇ ಸುಮ​ಲತಾ ಅವರು ಬಿಜೆಪಿ ಅಭ್ಯರ್ಥಿ ಎಂಬು​ದನ್ನು ಸ್ಪಷ್ಟ​ಪ​ಡಿ​ಸು​ತ್ತದೆ ಎಂದು ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಹೇಳಿದ್ದಾರೆ. 

ಬುಧ​ವಾರ ಸುದ್ದಿಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮಂಡ್ಯ​ದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿ​ಎ​ಸ್‌ನ ನಿಖಿಲ್‌ ಕುಮಾ​ರಸ್ವಾಮಿ ಭಾರೀ ಮತ​ಗಳ ಅಂತ​ರ​ದಲ್ಲಿ ಜಯ ಸಾಧಿ​ಸ​ಲಿದ್ದು, ಅಲ್ಲಿ ಮೈತ್ರಿ ಪಕ್ಷದ ಗೆಲುವು ನಿಶ್ಚಿತ ಎಂದರು. 

ಇದೇ ವೇಳೆ ಮಂಡ್ಯದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯ​ಕ​ರ್ತರು ಸುಮ​ಲತಾ ಪರ ಕೆಲಸ ಮಾಡಿ, ಪಕ್ಷ ವಿರೋಧಿ ಚಟು​ವ​ಟಿಕೆ ನಡೆ​ಸಿ​ದರೆ ಸಹಿ​ಸು​ವು​ದಿಲ್ಲ. ಈಗಾ​ಗಲೇ ಐವ​ರನ್ನು ಪಕ್ಷ​ದಿಂದಲೇ ಉಚ್ಚಾ​ಟಿ​ಸಿದ್ದು ಇಂತಹ ಘಟ​ನೆ​ಗಳು ಪುನ​ರಾ​ವ​ರ್ತ​ನೆ​ಯಾ​ದರೆ ಅಂತಹವರಿಗೆ ಪಕ್ಷದ ಹುದ್ದೆ​ಗ​ಳಿಂದಲೇ ಗೇಟ್‌ ಪಾಸ್‌ ನೀಡ​ಲಾ​ಗು​ವುದು ಎಂದು ಎಚ್ಚ​ರಿ​ಕೆ ಸಂದೇಶ ರವಾ​ನಿ​ಸಿ​ದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.