ಹಾಸನ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇದೇ ವೇಳೆ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರೇವಣ್ಣ ಪುತ್ರ ಪ್ರಜ್ವಲ್ ನಾಮಪತ್ರದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. 

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್  ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ದಾಖಲೆಗಳನ್ನು ನೀಡಿದ್ದೇನೆ ಎನ್ನುವ ಆರೋಪ ಮಾಡುವವರು ನ್ಯಾಯಾಲಯದಲ್ಲಿ ಹೋರಾಡಲಿ ಎಂದಿದ್ದಾರೆ. 

ಅಲ್ಲಿಯೇ ನಾನು ಉತ್ತರಿಸುತ್ತೇನೆ. ನನ್ನ ಆಸ್ತಿಯ ದಾಖಲೆಗಳು ಸರಿಯಾಗಿವೆ. ಯಾವುದೋ ವೆಬ್‌ಸೈಟ್‌ನಲ್ಲಿ ಹಾಕಿರುವ ತಪ್ಪುಗಳಿಗೆ ನಾನು ಜವಾಬ್ದಾರಿ ಅಲ್ಲ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28