ಬೆಳಗಾವಿ  : ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ ಕಂಪ್ಲಿ ಶಾಸಕ ಗಣೇಶ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.  ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿ ಅರ್ನಿಯಾ ಹಾಗೂ ಯೂರಿನರಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ. 

ಇನ್ನು ಮೂರು ನಾಲ್ಕು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಗಣೇಶ್ ಗೆ ಈ ಬಾರಿ ಮತದಾನ ಮಾಡುವ ಅವಕಾಶವಿಲ್ಲ. ಶಾಸಕ ಆನಂದ್ ಸಿಂಗ್  ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರಿಂದ ಮತದಾನದ ಅವಕಾಶವಿಲ್ಲ. ಮತದಾನ ಮಾಡಲು ಕೋರ್ಟ್ ಗೆ ಮನವಿ ಮಾಡದ ಹಿನ್ನೆಲೆಯಲ್ಲಿ ವೋಟ್ ನಿಂದ ವಂಚಿತರಾಗಲಿದ್ದಾರೆ. 

ಗಣೇಶ್ ವಿರುದ್ಧ ಸದ್ಯ ವಿಚಾರಣೆ ಮುಗಿದಿದ್ದು, ಈ ಬಗ್ಗೆ ಆದೇಶ ಲಾಯ್ದಿರಿಸಲಾಗಿದೆ. ಹೈ ಕೋರ್ಟ್ ನಲ್ಲಿ ಗಣೇಶ್ ಕೇಸ್ ವಿಚಾರಣೆ ನಡೆದಿದೆ. 

ರೆಸಾರ್ಟ್ ನಲ್ಲಿ ಇದ್ದ ವೇಳೆ ಶಾಸಕ ಆನಂದ್ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಕಂಪ್ಲಿ ಶಾಸಕ ಗಣೇಶ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಅನಾರೋಗ್ಯ ಹಿನ್ನೆಲೆ ಗಣೇಶ್ ಕೂಡ ಆಸ್ಪತ್ರೆ ಸೇರಿದ್ದು, ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.