ಲೋಕಸಭಾ ಚುನಾವಣೆ ದೇಶದಲ್ಲಿ ನಡೆಯುತ್ತಿದ್ದು, ಇದೇ ವೇಳೆ ಈ ಕ್ಷೇತ್ರದಿಂದ ಮರು ಚುನಾವಣೆ ನಡೆಸಲು ಅಭ್ಯರ್ಥಿಯೋರ್ವರು ಆಗ್ರಹಿಸಿದ್ದಾರೆ.
ವಯನಾಡು : ವಯನಾಡು ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಬಳಕೆ ಮಾಡಲಾದ ಮತಯಂತ್ರದಲ್ಲಿ ದೋಷ ಕಂಡು ಬಂದಿದೆ ಎಂದು NDA ಅಭ್ಯರ್ಥಿ ಆರೋಪಿಸಿದ್ದಾರೆ.
Add Asianetnews Kannada as a Preferred Source

ವಯನಾಡು NDA ಮೈತ್ರಿ ಕೂಟದ ಅಭ್ಯರ್ಥಿ ತುಷಾರ್ ವೆಲ್ಲಪಳ್ಳಿ ಈ ಆರೋಪ ಮಾಡಿದ್ದು, ಮರು ಮತದಾನಕ್ಕೆ ಆಗ್ರಹಿಸಿದ್ದಾರೆ.
ವಯನಾಡುವಿನ ಸಿಎಂಎಸ್ ಶಾಲೆಯ ಮತಗಟ್ಟೆ ಸಂಖ್ಯೆ 79 ರಲ್ಲಿ , ಅರಪಟ್ಟದಲ್ಲಿ ಮತಯಂತ್ರಗಳಲ್ಲಿ ಸಮಸ್ಯೆ ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.
ಅಲ್ಲದೇ ಮತ ಯಂತ್ರಗಳನ್ನು ಬದಲಾಯಿಸಿ ಮರು ಮತದಾಣ ಮಾಡುವಾಗ ಪತ್ರದಲ್ಲಿ ತಿಳಿಸಲಾಗಿದೆ.
ತುಷಾರ್ ವೆಲ್ಲಪಳ್ಳಿ ಭಾರತ್ ಧರ್ಮ ಜನ ಸೇನಾ ಪಕ್ಷದ ಮುಖ್ಯಸ್ಥರಾಗಿದ್ದಾರೆ.
ಕೇರಳದಲ್ಲಿ 20 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
