ನವದೆಹಲಿ[ಮಾ.19]: ಲೋಕಸಭೆ ಚುನಾವ ಣೆಯ ಮೊದಲ ಹಂತಕ್ಕೆ ಅಧಿಸೂಚನೆ ಹೊರಬೀಳುತ್ತಿದ್ದಂತೆ, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು/ ಅಭ್ಯರ್ಥಿಗಳು ಹಣದ ಹೊಳೆ ಹರಿಸಬ ಹುದಾದ ಸಾಧ್ಯತೆ ಇರುವ 112 ಕ್ಷೇತ್ರಗಳನ್ನು ಕೇಂದ್ರೀಯ ಚುನಾವಣಾ ಆಯೋಗ ಗುರುತಿಸಿದೆ. ಇದರಲ್ಲಿ ಕರ್ನಾಟಕದ 12 ಲೋಕಸಭಾ ಕ್ಷೇತ್ರ ಗಳೂ ಸೇರಿವೆ. ಆದರೆ ಈ ಕ್ಷೇತ್ರಗಳು ಯಾವುವು ಎಂಬುದರ ಮಾಹಿತಿಯನ್ನು ಆಯೋಗ ಬಹಿರಂಗಪಡಿಸಿಲ

ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಹಣ ಮತ್ತು ಮಾದಕ ದ್ರವ್ಯ, ಮದ್ಯ, ಗೃಹ ಬಳಕೆಯಂತಹ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದಾದ ಕ್ಷೇತ್ರ ಗಳ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಗಳು ಸಲ್ಲಿಕೆ ಮಾಡಿವೆ. ಅದರ ಆಧಾರದಲ್ಲಿ 112 ಲೋಕಸಭಾ ಕ್ಷೇತ್ರಗಳನ್ನು ವೆಚ್ಚ ಸೂಕ್ಷ್ಮ ಅಥವಾ ಹಣ ಬಲ ಚಲಾ ವಣೆಯಾಗುವ ಕ್ಷೇತ್ರಗಳು ಎಂದು ಆಯೋಗ ಗುರುತಿಸಿದೆ. ಉತ್ತರಪ್ರದೇಶ ಸೇರಿ ಕೆಲವೊಂದು ರಾಜ್ಯಗಳಿಂದ ಇಂತಹ ಕ್ಷೇತ್ರಗಳ ಕುರಿತು ಮಾಹಿತಿ ಬಂದಿಲ್ಲ. ಹೀಗಾಗಿ ವೆಚ್ಚ ಸೂಕ್ಷ್ಮ ಕ್ಷೇತ್ರಗಳ ಸಂಖ್ಯೆ 150ರ ಗಡಿ ದಾಟ ಬಹುದು ಎಂಬ ನಿರೀಕ್ಷೆಯನ್ನು ಆಯೋಗ ಹೊಂದಿದೆ.

ಇಂತಹ ಕ್ಷೇತ್ರಗಳಲ್ಲಿ ಹಣ ಪ್ರಭಾವ ಕೆಲಸ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ತಲಾ ಇಬ್ಬರು ವೆಚ್ಚ ವೀಕ್ಷಕರನ್ನು ರವಾನಿಸಲು ಆಯೋಗ ಉದ್ದೇಶಿಸಿದೆ. ಈ ವೀಕ್ಷಕರು ವಿಶೇಷ ತಂಡವೊಂದನ್ನು ರಚಿಸುವ ಮೂಲಕ ತಳಮಟ್ಟದ ಪರಿಸ್ಥಿತಿಯ ಮೇಲೆ ನಿಗಾ ಇಡಲಿದ್ದಾರೆ. ಇದರ ಜತೆಗೆ ಇತ್ತೀಚೆಗೆ ರಚನೆಯಾಗಿರುವ ಬಹು ಇಲಾಖಾ ಚುನಾ ವಣಾ ಗುಪ್ತಚರ ಸಮಿತಿ ಕೂಡ ತಪಾಸಣೆ ನಡೆಸಲಿದೆ.

ಈ ವೇಳೆ ಅಕ್ರಮ ಹಣದ ಹರಿವನ್ನು ಪತ್ತೆ ಹಚ್ಚಿ ಜಪ್ತಿ ಮಾಡಿಕೊಳ್ಳಲಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ. ಆಯೋಗ ಸಿದ್ಧಪಡಿಸಿರುವ 112 ಲೋಕಸಭಾ ಕ್ಷೇತ್ರಗಳ ಪಟ್ಟಿಯಲ್ಲಿ ತಮಿಳುನಾಡಿನ ಎಲ್ಲ 39 ಕ್ಷೇತ್ರಗಳೂ ಇವೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳ ಪೈಕಿ 116, 25 ಲೋಕಸಭಾ ಕ್ಷೇತ್ರಗಳ ಪೈಕಿ 16, ತೆಲಂಗಾಣದ ಎಲ್ಲ 17, ಬಿಹಾರದ 40 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳು ಇವೆ. ಗುಜರಾತಿನ 26 ಲೋಕಸಭಾ ಕ್ಷೇತ್ರಗಳ ಪೈಕಿ 18, ಉತ್ತರಾಖಂಡದ 5 ಕ್ಷೇತ್ರಗಳ ಪೈಕಿ 4 ಇವೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 300 ಕೋಟಿ ರು. ನಗದು ಸೇರಿದಂತೆ 1200 ಕೋಟಿ ರು. ಮೌಲ್ಯದ ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಕೋಟಿ ರು. ಗೂ ಅಧಿಕ ವೆಚ್ಚವಾಗಬಹುದೆಂದು ಖಾಸಗಿ ಸಂಸ್ಥೆಗಳು ಅಂದಾಜಿಸಿ