ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ವಿವಿಧೆಡೆ ಸುಮಾರು ಏಳು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಈ ಪೈಕಿ ಬರುವ ಏ.7 ರಂದು ಉಡುಪಿ ಮತ್ತು ಮೈಸೂರಿನಲ್ಲಿ ಮೋದಿ  ಅವರ ಸಮಾವೇಶಗಳನ್ನು ಆಯೋಜಿಸಲು ರಾಜ್ಯ ಘಟಕ ನಿರ್ಧರಿಸಿದೆ ಎಂದು ಮೋದಿ ಸಮಾವೇಶಗಳ ಉಸ್ತುವಾರಿಯಾಗಿರುವ ಪಕ್ಷದ ನಾಯಕ ಆರ್. ಅಶೋಕ ಮಾಹಿತಿ ನೀಡಿದ್ದಾರೆ. 

ಇನ್ನುಳಿದಂತೆ ಬೆಂಗಳೂರು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ ಹಾಗೂ ವಿಜಯಪುರಗಳಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮೋದಿ ಅವರು ಮಾತನಾಡುವಂತೆ ಕೋರಲಾಗಿದೆ.