ಮಹಾಭಾರತ ಸಂಗ್ರಾಮ: ಗೋವಾ ರಾಜ್ಯ

ಪಣಜಿ[ಮಾ.13]: ಗೋವಾದಲ್ಲಿ ಈ ಸಲ ಎರಡು ಲೋಕಸಭೆ ಚುನಾವಣೆಗಳ ಜತೆ ಮೂರು ವಿಧಾನಸಭೆ ಉಪಚುನಾವಣೆಗಳೂ ನಡೆಯಲಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಜಯಿಸಿ, ‘ಕಾಂಗ್ರೆಸ್ ಮುಕ್ತ ಗೋವಾ’ ಮಾಡಿದ್ದ ಬಿಜೆಪಿ ಈ ಸಲ ಹಿನ್ನಡೆಯಲ್ಲಿದೆ.

ಬಿಜೆಪಿ ಈ ಸಲ ಹಿನ್ನಡೆಯಲ್ಲಿದೆ. ಕಳೆದ ಸಲ ಮನೋಹರ್ ಪರ‌್ರಿಕರ್ ಹಾಗೂ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ಉಭಯ ಕ್ಷೇತ್ರಗಳನ್ನು ಜಯಿಸಿತ್ತು. ಆದರೆ ಮಾಸಿಕ 1500 ಕೋಟಿ ರು. ವರಮಾನ ತರುತ್ತಿದ್ದ ಗೋವಾದಲ್ಲಿ ಸುಮಾರು ೧ ವರ್ಷದಿಂದ ಸುಪ್ರೀಂ ಕೋರ್ಟ್ ಆದೇಶಾನುಸಾರ ಬಂದ್ ಆಗಿರುವ ಗಣಿಗಾರಿಕೆಯು ಸಾವಿರಾರು ಪ್ರತ್ಯಕ್ಷ ಹಾಗೂ ಪರೋಕ್ಷ ನೌಕರರನ್ನು ನಿರುದ್ಯೋಗಿಯನ್ನಾಗಿ ಮಾಡಿದೆ. ಗಣಿಗಾರಿಕೆ ಪುನಾರಂಭಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡಿಲ್ಲ ಎಂಬ ಆರೋಪಗಳೂ ಇವೆ. ಇದು ಬಿಜೆಪಿ ಸರ್ಕಾರಕ್ಕೆ ತಲೆಬಿಸಿ ಮಾಡಿದೆ. ಇದೇ ವೇಳೆ ಮಾರಣಾಂತಿಕ ಕ್ಯಾನ್ಸರ್‌ನಿಂದ ಪರ‌್ರಿಕರ್ ಅವರು ಬಳಲುತ್ತಿ ರುವುದು ಕೂಡ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಘಿಇದನ್ನೇ ಬಳಸಿಕೊಳ್ಳಲು ಹೊರಟಿರುವ ಕಾಂಗ್ರೆಸ್, ಕನಿಷ್ಠಪಕ್ಷ ಈ ಹಿಂದೆ ತನ್ನ ಭದ್ರಕೋಟೆಯಾಗಿದ್ದ ದಕ್ಷಿಣ ಗೋವಾವನ್ನಾದರೂ ಮರುವಶ ಮಾಡಿಕೊಳ್ಳಬೇಕು ಎಂಬ ಸನ್ನಾಹದಲ್ಲಿದೆ.

ಮೇಲಾಗಿ ಇತ್ತೀಚಿನ ‘ಆಪರೇಶನ್ ಕಮಲ’ದ ಹೊಡೆತದಿಂದ ನಲುಗಿ ಹೋಗಿರುವ ಪಕ್ಷ, ಜನರ ಅನುಕಂಪವನ್ನು ಪಡೆದು ಪುನಃ ಕಳೆದುಕೊಂಡ ನೆಲೆ ಪುನಾಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿ

ದಕ್ಷಿಣ ಗೋವಾ: ದಕ್ಷಿಣ ಗೋವಾದಲ್ಲಿ ಗಣಿಗಾರಿಕೆ ಪ್ರಧಾನವಾಗಿದ್ದು, ೨೦೦೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಸವಾಯ್‌ಕರ್ ಜಯಿಸಿದ್ದರು. ಇವವ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಲೆಕ್ಸಿಯೋ ರೆಜಿನಾಲ್ಡೋ ಲಾರೆನ್ಸೋ ಕೇವಲ ೩೨ ಸಾವಿರ ಮತದಿಂದ ಸೋತಿದ್ದರು. ಈ ಮೂಲಕ ತನ್ನ ಭದ್ರಕೋಟೆಯನ್ನು ಬಿಜೆಪಿಗೆ ಕಾಂಗ್ರೆಸ್ ಕಳೆದುಕೊಂಡಿತ್ತು. ಅಕ್ರಮ ಲೀಸ್‌ಗಳ ಕಾರಣ ಸುಪ್ರೀಂ ಕೋರ್ಟ್ ಆದೇಶಾನುಸಾರ ಗಣಿಗಾರಿಕೆ ಬಂದ್ ಆಗಿರುವುದು ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ಕೊಡುವ ಸಾಧ್ಯತೆ ಇದೆ. ಇಲ್ಲಿ ಸವಾಯ್‌ಕರ್‌ಗೆ ಪುನಃ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ನಿಚ್ಚಳವಾಗಿದ್ದು, ಅವರ ವಿರುದ್ಧ ಕಾಂಗ್ರೆಸ್‌ನ ವಲಂಕಾ ಅಲೆಮಾವೋ (ಎನ್‌ಸಿಪಿ ಶಾಸಕ ಚರ್ಚಿಲ್ ಅಲೆಮಾವೋ ಪುತ್ರಿ), ಫ್ರಾನ್ಸಿಸ್ಕೋ ಸಾರ್ಡಿನಾ ಹಾಗೂ ಕ್ಲೆಫ್ಯಾಟೋ ಕುಟಿನ್ಹೋ ನಡುವೆ ಟಿಕೆಟ್‌ಗೆ ಸ್ಪರ್ಧೆ ಏರ್ಪಟ್ಟಿ

ಇಲ್ಲಿ ಆಪ್ ಹಾಗೂ ಇತರ ಪಕ್ಷಗಳು ಸ್ಪರ್ಧಿಸುವ ಸಾಧ್ಯತೆ ಇದ್ದರೂ ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಪಕ್ಷಗಳಾಗಿವೆ. ಆದರೆ ಬಿಜೆಪಿ ಮಿತ್ರಪಕ್ಷ ಎಂಜಿಪಿ ಇತ್ತೀಚೆಗೆ ಸಿಡಿದೆದ್ದಿದ್ದು, ಅದು ಯಾರನ್ನು ಬೆಂಬಲಿಸುತ್ತದೆ ಎಂಬುದು ಕುತೂಹಲ ಕಾರಿಯಾಗಿದೆ. 

ಉತ್ತರ ಗೋವಾ: ಉತ್ತರ ಗೋವಾ ಬಿಜೆಪಿ ಭದ್ರಕೋಟೆಯಾಗಿದ್ದು, ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ಸತತ ೫ನೇ ಬಾರಿ ಇಲ್ಲಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಒಡಕು, ಮಿತ್ರಪಕ್ಷ ಎಂಜಿಪಿ ಬಂಡಾಯ, ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಜತೆ ವೈಷಮ್ಯ ಕಟ್ಟಿಕೊಂಡಿರುವುದು- ಇವು ಅವರಿಗೆ ಇರುವ ಮೈನಸ್ ಪಾಯಿಂಟ್‌ಗಳಾಗಿ

ನಾಯಕ್ ವಿರುದ್ಧ ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಛೋಡಂಕರ್ ಅಥವಾ ಹಿರಿಯ ಮುಖಂಡ ರಮಾಕಾಂತ ಖಲಪ್ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾದರೆ ಇಬ್ಬರ ದಿಗ್ಗಜರ ನಡುವೆ ದೊಡ್ಡ ಹೋರಾಟವೇ ನಡೆದಂತಾಗುತ್ತದೆ.

3 ಕ್ಷೇತ್ರಗಳಿಗೆ ಉಪಚುನಾವಣೆ ಲೋಕಸಭೆ ಕ್ಷೇತ್ರಗಳ ಜತೆ ಗೋವಾದಲ್ಲಿ ೩ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ ೨೩ರಂದು ಚುನಾವಣೆಗಳು ನಡೆಯಲಿವೆ. ಮಾಂಡ್ರೆಂ, ಶಿರೋಡಾ ಹಾಗೂ ಮಾಪುಸಾ ಕ್ಷೇತ್ರಗಳು ಚುನಾವಣೆ ಎದುರಿಸಲಿವೆ.

ಈ ಪೈಕಿ ಮಾಂಡ್ರೆಂ ಹಾಗೂ ಶಿರೋಡಾ ಕ್ಷೇತ್ರಗಳಿಗೆ ‘ಆಪರೇಶನ್ ಕಮಲ’ದ ಕಾರಣ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿದ್ದ ದಯಾನಂದ ಸೋಪ್ಟೆ ಹಾಗೂ ಸುಭಾಷ್ ಶಿರೋಡ್ಕರ್ ಅವರು ಪಕ್ಷ ತೊರೆದು ಶಾಸಕತ್ವಕ್ಕೆ ರಾಜೀನಾಮೆ ನೀಡಿ ಈಗ ಬಿಜೆಪಿ ಸ್ಪರ್ಧಿಗಳಾಗಿ ದ್ದಾರೆ. ಇದು ಮೂಲ ಬಿಜೆಪಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ತಮ್ಮನ್ನು ಕಳೆದ ಚುನಾವಣೆ ಯಲ್ಲಿ ಸೋಲಿಸಿದ್ದ ಸೋಪ್ಟೆ ವಿರುದ್ಧ ಬಿಜೆಪಿಯವರೇ ಆದ ಹಿಂದಿನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಸಿಡಿದೆದ್ದಿದ್ದಾರೆ. ಅವರಿಗೆ ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ಮುಖಂಡ ದೀಪಕ್ ಧಾವಳೀಕರ್ ಆಹ್ವಾನ ನೀಡಿದ್ದಾರೆ. ಪಾರ್ಸೇಕರ್ ಕೂಡ ತಮ್ಮ ಬೆಂಬಲಿಗರ ಬಲಪ್ರದರ್ಶನ ಮಾಡುತ್ತ ಬಂಡಾಯದ ಸುಳುಹು ನೀಡಿದ್ದಾರೆ. ಸುಭಾಷ್ ಶಿರೋಡ್ಕರ್ ವಿರುದ್ಧವೂ ಮೂಲ ಬಿಜೆಪಿಗರಲ್ಲಿ ಆಕ್ರೋಶವಿದೆ. ಇನ್ನು ಮಾಪುಸಾದಲ್ಲಿ ಬಿಜೆಪಿ ಶಾಸಕ ಫ್ರಾನ್ಸಿಸ್ ಡಿ’ಸೋಜಾ ನಿಧನದಿಂದ ಚುನಾವಣೆ ನಡೆಯಬೇಕಿದ್ದು, ಇಲ್ಲಿ ಬಿಜೆಪಿಯಲ್ಲಿ ಡಿಸೋಜಾ ಪುತ್ರ ಜೋಶುವಾ ಡಿಸೋಜಾ ಹಾಗೂ ಹಿರಿಯ ಮುಖಂಡ ಸುಧೀರ್ ಕಾಂಡೋಲ್ಕರ್ ನಡುವೆ ‘ಟಿಕೆಟ್ ಫೈಟ್’ ಇದೆ. ಮುಖ್ಯಮಂತ್ರಿ ಕಚೇರಿಯ ರೂಪೇಶ್ ಕಾಮತ್ ಹೆಸರೂ ಚಾಲ್ತಿಯಲ್ಲಿದೆ.

ಅಡ್ವಾಂಟೇಜ್ ಕಾಂಗ್ರೆಸ್: ಮೂರೂ ಕ್ಷೇತ್ರ ಜಯಿಸಿ ದರೆ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪಕ್ಷ ಎಂಬ ಹಣೆಪಟ್ಟಿ ಮತ್ತೆ ಸಿಗಲಿದೆ. ರಾಜಕೀಯ ಸ್ಥಿತ್ಯಂತರಕ್ಕೂ ಈ ವಿದ್ಯಮಾನ ಕಾರಣವಾಗಬಹುದಾಗಿದೆ.

ಬಿಜೆಪಿಗೆ ಇವೆ ಭಾರಿ ಸವಾಲುಗಳು

ಮನೋಹರ ಪರ‌್ರಿಕರ್ ಅವರ ಅನಾರೋ ಗ್ಯದಿಂದ ಆಡಳಿತ ಯಂತ್ರ ಸ್ಥಗಿತ, ಗೋವಾ ಗಣಿಗಾರಿಕೆ ಸ್ಥಗಿತ, ಮಿತ್ರಪಕ್ಷ ಎಂಜಿಪಿ ಬಂಡಾಯ, ಬಿಜೆಪಿಯಲ್ಲೇ ಪರ‌್ರಿಕರ್ ಹಾಗೂ ಶ್ರೀಪಾದ್ ನಾಯಕ್ ವಿರುದ್ಧ ಮಾಜಿ ಮುಖ್ಯಮಂತ್ರಿ ಪಾರ್ಸೇಕರ್ ಬಂಡಾಯ, ಆಪರೇಶನ್ ಕಮಲದ ಬಗ್ಗೆ ಇರುವ ಅಸಮಾಧಾನಗಳು ಬಿಜೆಪಿಗೆ ಸವಾಲುಗಳಾಗಿವೆ. ಆದರೆ ಮಿತ್ರಪಕ್ಷ ‘ಗೋವಾ ಫಾರ್ವರ್ಡ್’, ತನ್ನ ಬೆನ್ನಿಗೆ ಗಟ್ಟಿಯಾಗಿ ನಿಂತಿರುವುದು ಬಿಜೆಪಿಗೆ ಸಮಾಧಾನ ತಂದಿದೆ

ಪ್ರಮುಖ ಸಂಭಾವ್ಯವರು

ಶ್ರೀಪಾದ ನಾಯಕ್ (ಬಿಜೆಪಿ)

ಗಿರೀಶ್ ಛೋಡಂಕರ್ (ಕಾಂಗ್ರೆಸ್)

ನರೇಂದ್ರ ಸವಾಯ್‌ಕರ್ (ಬಿಜೆಪಿ)

ರಮಾಕಾಂತ ಖಲಪ್ (ಕಾಂಗ್ರೆಸ್)

ವಲಂಕಾ ಅಲೆಮಾವೋ (ಕಾಂಗ್ರೆಸ್)

ಪ್ರಮುಖ ಕ್ಷೇತ್ರಗಳು

ಉತ್ತರ ಗೋವಾ

ದಕ್ಷಿಣ ಗೋವಾ