ಹೈದರಾಬಾದ್‌: ಚುನಾವಣೆಯ ವೇಳೆ ಮತದಾರರನ್ನು ಸಳೆಯಲು ಹಣ ಮತ್ತು ಹೆಂಡ ಹಂಚುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಯಾರೂ ಅವುಗಳನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮದ್ಯದ ಬಾಟಲಿಗಳನ್ನು ಪಕ್ಷದ ಸ್ಟಿಕರ್‌ ಸಮೇತ ರಾಜಾರೋಷವಾಗಿ ಹಂಚಲಾಗುತ್ತಿದೆ.

ಆಂಧ್ರ ಪ್ರದೇಶದಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸ್ಟಿಕರ್‌ ಅಂಟಿಸಿರುವ ಮದ್ಯದ ಬಾಟಲಿಗಳನ್ನು ರಾರ‍ಯಲಿಗಳಲ್ಲಿ ಭಾಗವಹಿಸುವ ಜನರಿಗೆ ಹಂಚಲಾಗಿದೆ. ತೆಲಂಗಾಣದಲ್ಲಿ ಗುಲಾಬಿ ಬಣ್ಣದ ಸ್ಟಿಕರ್‌ ಹಾಗೂ ಅಭ್ಯರ್ಥಿಗಳು ಮುಖಂಡರ ಫೋಟೋ ಇರುವ ಮದ್ಯದ ಬಾಟಲಿಗಳು ಕಂಡು ಬರುತ್ತಿವೆ. ಹೀಗಾಗಿ ಮದ್ಯದ ಬಾಟಲಿ ಹಂಚಿದವರು ಯಾವ ಪಕ್ಷದವರು ಎನ್ನುವುದನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಪಕ್ಷಗಳು 2-3 ವಾರಗಳ ಹಿಂದೆಯೇ ಮದ್ಯದ ಬಾಟಲಿಗಳನ್ನು ತಮ್ಮ ಸುರಕ್ಷಿತ ಗೋಡೌನ್‌ಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದು, ರಾರ‍ಯಲಿಗಳು ಮತ್ತು ರೋಡ್‌ ಶೋಗಳು ನಡೆಯುವ ಸಂದರ್ಭದಲ್ಲಿ ಅವುಗಳಿಗೆ ಸ್ಟಿಕರ್‌ ಅಂಟಿಸಿ ಹಂಚಲಾಗುತ್ತಿದೆ.

ತೆಲಂಗಾಣದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮಾಚ್‌ರ್‍ ಮೊದಲ ವಾರದಲ್ಲಿ 4.30 ಕೋಟಿ ರು. ಮೊತ್ತದ 3.50 ಲಕ್ಷ ಲೀಟರ್‌ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಆಂಧ್ರ ಪ್ರದೇಶದಲ್ಲಿ 9 ಕೋಟಿ ರು. ಮೊತ್ತದ ಮದ್ಯದ ಬಾಟಲಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.