ಬೆಂಗಳೂರು[ಏ.04]: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳು ಮತದಾರನನ್ನು ಸೆಳೆಯುವ ಯತ್ನದಲ್ಲಿದ್ದಾರೆ. ಅಬ್ಬರದ ಪ್ರಚಾರದ ನಡುವೆ ಈ ಬಾರಿ ಯಾರು ಗೆಲುವು ಸಾಧಿಸುತ್ತಾರೆಂಬ ಚರ್ಚೆಗಳು ಜೋರಾಗಿವೆ. ಇದಕ್ಕೆ ತಕ್ಕಂತೆ ಹಲವಾರು ಸಮೀಕ್ಷೆಗಳು ಹೊರ ಬಿದ್ದಿವೆ. ಹೀಗಿರುವಾಗ ಕರ್ನಾಟಕದಲ್ಲಿ ಗೆಲುವು ಯಾರ ಪಾಲಾಗುತ್ತೆ? ಸಂಸತ್ತಿಗೆ ಪ್ರವೇಶಿಸುವವರು ಯಾರು? ಎಂಬ ಕುತೂಹಲ ಗರಿ ಗೆದರಿದೆ. ಹೀಗಿರುವಾಗ ಸುವರ್ಣ ನ್ಯೂಸ್ ಹಾಗೂ ಎ ಐಡ್ ಸಂಸ್ಥೆ ಕರ್ನಾಟಕ ಕಾಯುತ್ತಿರುವ ಮಹಾ ಸಮೀಕ್ಷೆಯನ್ನು ನಡೆಸಿದೆ.

ರಾಜ್ಯದಲ್ಲಿ ಜನರು ಕಮಲವನ್ನು ಆರಿಸುತ್ತಾರೋ? ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಕೈ ಹಿಡಿಯುತ್ತಾರೋ ಎಂದು ತಿಳಿಯಲು ಕರ್ನಾಟಕ ಮಂದಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಹೀಗಿರುವಾಗ ಸುವರ್ಣ ನ್ಯೂಸ್, ಕನ್ನಡ ಪ್ರಭ ಹಾಗೂ ಎ ಐಡ್ ಸಂಸ್ಥೆ ಚುನಾವಣಾ ಸಮೀಕ್ಷೆ ನಡೆಸಿದೆ. ಈ ಹಿಂದೆ ನೀಡಿರುವ ಚುನಾವಣಾ ಸಮೀಕ್ಷೆಗಳಲ್ಲಿ ನಿಖರ ಫಲಿತಾಂಶ ನೀಡಿ ಅಖಂಡ ವಿಶ್ವಾಸಾರ್ಹತೆಗೆ ಹೆಸರಾದ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಈ ಬಾರಿ ನಡೆಸಿದ ಸರ್ವೆಯಲ್ಲಿ ಯಾರ ಕೈ ಮೇಲಾಗಿದೆ? ಯಾವ ಪಕ್ಷಕ್ಕೆ ಎಷ್ಟು ಸೀಟು ಹಾಗೂ ಯಾರೆಷ್ಟು ಜನಪ್ರಿಯರಾಗಿದ್ದಾರೆ? ಮೋದಿ ವರ್ಸಸ್ ಮೈತ್ರಿಯ ಕುರಿತಾಗಿ ಕರ್ನಾಟಕ ಏನನ್ನುತ್ತಿದೆ? ಕುತೂಹಲಭರಿತ ಈ ಮಹಾ ಸಂಗ್ರಾಮದ ಮಹಾ ಸಮೀಕ್ಷೆ ಇಂದು, ಶುಕ್ರವಾರ ಸಂಜೆ 06 ಗಂಟೆಯಿಂದ ಸುವರ್ಣ ನ್ಯೂಸ್ ನಲ್ಲಿ ನೇರಪ್ರಸಾರವಾಗಲಿದೆ.

ಕರ್ನಾಟಕದ ಮತದಾರರ ಒಲವು ಯಾರ ಮೇಲಿದೆ? ಕರ್ನಾಟಕದ ಓಟರ್ಸ್ ಏನಂತಾರೆ ವೀಕ್ಷಿಸಲು ಮರೆಯದಿರಿ