ಮಂಡ್ಯ : ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಅಂಬರೀಶ್  ಪರ ಜೆಡಿಎಸ್ ನಾಯಕರು ಕೆಲಸ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಇದೀಗ ಇನ್ನೋರ್ವ ಕೈ ನಾಯಕರ ಹೇಳಿಕೆ ಪುಷ್ಟಿ ನೀಡಿದೆ. 

ಮಳ್ಳವಳ್ಳಿಯಲ್ಲಿ ಮಾತನಾಡಿದ ಮಾಜಿ ಶಾಸಕ ನರೇಂದ್ರ ಸ್ವಾಮಿ ಈ ಬಗ್ಗೆ ಮಾತನಾಡಿದ್ದು, JDS ನ ಕೆಲವರು ಬೆಂಬಲ ನೀಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇದ್ದು, ಕುಮಾರಸ್ವಾಮಿ, ದೇವೇಗೌಡರಿಗೆ ಯಾರು ಎಲ್ಲಿ ಮೋಸ ಮಾಡಿದ್ದಾರೆ ಎನ್ನುವುದು ಮುಂದೆ ಚರ್ಚೆಗೆ ಬರಲಿದೆ ಎಂದು ಹೇಳಿದರು. 

ಮಂಡ್ಯ ರಾಜಕೀಯದಲ್ಲಿ ಏನೇನು ನಡೆದಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ತಾವು ಮಾತ್ರ ಯಾರ ಪರವೂ ಕೆಲಸ ಮಾಡದೇ ತಟಸ್ಥವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಸ್ಪಷ್ಟಪಡಿಸಿದ್ದೆ ಎಂದು ನರೇಂದ್ರ ಸ್ವಾಮಿ ಹೇಳಿದರು. 

ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಪರ ಕೆಲಸ ಮಾಡಿಲ್ಲದಿದ್ದರೆ ಮಹದೇಶ್ವರ ಸನ್ನಿಧಿಯಲ್ಲಿ ಆಣೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅದಕ್ಕೆ ಯೋಗ್ಯರಾಗಿರುವವರು ಮಾತನಾಡಿದಾಗ ಮಾತ್ರ ಉತ್ತರ ನೀಡುತ್ತೇ. ಎಲ್ಲರಿಗೂ ಉತ್ತರಿಸುವ ಅನಿವಾರ್ಯತೆ ಇಲ್ಲ ಎಂದರು.