Asianet Suvarna News Asianet Suvarna News

ದೇವೇಗೌಡರ ವೋಟು ಅವರಿಗೇ ಇಲ್ಲ

ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ದೇವೇಗೌಡರ ಮತ ಅವರಿಗೆ ಇಲ್ಲವಾಗಿದೆ. 

Loksabha Elections 2019 HD Devegowda Cast His Vote In Hassan
Author
Bengaluru, First Published Apr 18, 2019, 1:01 PM IST

ಹಾಸನ: ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಹಾಸನದಲ್ಲಿ ಎಚ್.ಡಿ.ದೇವೇಗೌಡ - ಚೆನ್ನಮ್ಮ ದಂಪತಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಆದರೆ ದೇವೇಗೌಡರು ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಆದರೆ ಅವರ ಮತ ಕ್ಷೇತ್ರ ಹಾಸನವಾಗಿದ್ದು ಇಲ್ಲಿ ಮತ ಚಲಾಯಿಸಿದ್ದು, ಇದರಿಂದ ಅವರ ಮತ ಅವರಿಗೆ ಇಲ್ಲವಾಗಿದೆ.  

ಹಾಸನದಲ್ಲಿ ಮತದಾನ ಮಾಡಿದ್ದು, ಬಳಿಕ ತಮ್ಮ ಮೊಮ್ಮಗ ಪ್ರಜ್ವಲ್ ಗೆ ಮತ ಹಾಕಿದ್ದಾಗಿ ಹೇಳಿದ್ದಾರೆ. 

ಇನ್ನು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರೂ ಕೂಡ ಮಂಡ್ಯದ ಅಭ್ಯರ್ಥಿಯಾಗಿದ್ದು, ಅವರಿಗೂ ಕೂಡ ಅವರ ಮತ ಇಲ್ಲವಾಗಿದೆ. ವರು ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿರುವ ಕಾರಣ ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ವಾರ್ಡ್‌ನಲ್ಲಿ ನಿಖಿಲ್‌ ತಮ್ಮ ಮತ ಚಲಾಯಿಸಲಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios