ಬೆಂಗಳೂರು :  ರಾಜ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದಿದ್ದರೂ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ. ಮೋದಿಯವರಿಗೆ ಜನರ ಬಗ್ಗೆ ನಿಷ್ಠೆ ಇದ್ದರೆ ಬಿಜೆಪಿಗಾಗಿ ದುಡಿದ ದಿ. ಅನಂತಕುಮಾರ್‌ ಅವರನ್ನು ಏಕೆ ಸ್ಮರಿಸುತ್ತಿಲ್ಲ ಹಾಗೂ ಅವರ ಪತ್ನಿಗೆ ಏಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್‌ ನೀಡಲಿಲ್ಲ ಎಂಬುದು ಸೇರಿದಂತೆ ನನ್ನ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿ ಭಾಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಐದು ವರ್ಷದಲ್ಲಿ ರಾಜ್ಯ ಹಾಗೂ ದೇಶದಲ್ಲಿ ನರೇಂದ್ರ ಮೋದಿ ಯಾವುದೇ ಸಾಧನೆ ಮಾಡಿಲ್ಲ. ರಾಜ್ಯದಲ್ಲಿ ಬಂದು 20 ಪರ್ಸೆಂಟ್‌ ಸರ್ಕಾರ, ಹಂಪಿ ಉತ್ಸವ ಮಾಡಿಲ್ಲ ಎಂದೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ನನ್ನ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡಲು ಆಗುವುದಿಲ್ಲ. ಆದರೂ ಜನರಿಗಾಗಿ ನಾನು ಮೋದಿಗೆ ಪ್ರಶ್ನೆ ಕೇಳುತ್ತಿದ್ದೇನೆ. ನಾಳೆ ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

1.ಅನಂತಕುಮಾರ್‌ ಏಕೆ ನೆನಪಾಗಲಿಲ್ಲ

2.2ಜಿ ಹಗರಣ ಎಂದು ಏಕೆ ಸಾಬೀತು ಮಾಡಿಲ್ಲ

3.ಭದ್ರತಾ ವೈಫಲ್ಯಗಳಿಗೆ ನಿಮ್ಮ ಉತ್ತರವೇನು

4.ಹಿಂದುಳಿದ ವರ್ಗಕ್ಕೆ ಒಂದೂ ಟಿಕೆಟ್‌ ನೀಡಿಲ್ಲ

ಈ ನಾಲ್ಕು ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಲಿ ಎಂದಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.