Asianet Suvarna News Asianet Suvarna News

ಚುನಾವಣೋತ್ತರ ಸಮೀಕ್ಷೆ: ಸಿ-ವೋಟರ್‌ನಲ್ಲೂ ಎನ್​ಡಿಎ ಫೆವರಿಟ್!

ಮಹಾಭಾರತ ಮಹಾಸಂಗ್ರಾಮದ ಮಹಾ EXIT POL| ಮತದಾನೋತ್ತರ ಸಮೀಕ್ಷೆಯಲ್ಲಿ ದೇಶದ ಭವಿಷ್ಯದ ಅಂದಾಜು ಚಿತ್ರಣ| ಹೊರಬಿದ್ದ ಸಿ-ವೋಟರ್​​​ ಸಮೀಕ್ಷೆ| ಎನ್​ಡಿಎ 287 ಸ್ಥಾನಗಳು| ಯುಪಿಎಗೆ ಕೇವಲ 128 ಸ್ಥಾನ| ಕರ್ನಾಟಕದಲ್ಲೂ ಬಿಜೆಪಿಗೆ ಜೈ ಎಂದ ಮತದಾರ|

Loksabha Elections 2019 CVoter Exit Poll Survey
Author
Bengaluru, First Published May 19, 2019, 7:46 PM IST

ಬೆಂಗಳೂರು(ಮೇ.19): ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೀಗ ದೇಶದ ಚಿತ್ತ ಮೇ.23ರ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ವಿವಿಧ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಹೊರಗಡೆವಿದ್ದು, ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಅಂಶ ಇಲ್ಲಿದೆ.

ಸಿ-ವೋಟರ್​​​ ಸಮೀಕ್ಷೆ

ಸಿ-ವೋಟರ್​​​ ಸಮೀಕ್ಷೆ ಪ್ರಕಾರ ಎನ್​ಡಿಎ 287 ಸ್ಥಾನಗಳನ್ನು ಗಳಿಸಲಿದ್ದು, ಯುಪಿಎ 128 ಸ್ಥಾನಗಳು ಹಾಗೂ 127 ಸ್ಥಾನಗಳಲ್ಲಿ ಇತರರು ಗೆಲುವು ದಾಖಲಿಸಲಿದ್ದಾರೆ.

ಅದರಂತೆ ಕರ್ನಾಟಕದಲ್ಲಿ ಬಿಜೆಪಿಗೆ 18 ಸ್ಥಾನ, ಕಾಂಗ್ರೆಸ್​ 7 ಸ್ಥಾನ, ಜೆಡಿಎಸ್​  2, ಹಾಗೂ ಇತರೆ-1 ಎಂದು ಅಂದಾಜಿಸಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios