ಸೇಡಂ: ಮಂಡ್ಯ- ರಾಮನಗರಗಳಲ್ಲಿ ಜೋಡೆತ್ತು ವಿಚಾರ ಬಿಸಿಬಿಸಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಕಲಬುರಗಿಯಲ್ಲೂ ಜೋಡೆತ್ತಿನ ಪ್ರಸ್ತಾಪವಾಗಿದೆ. 

ಕಲಬುರಗಿ ಲೋಕಸಭಾ  ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಪದ ಕೊಡ ತುಂಬಿದ್ದು ಅವರನ್ನು ಸೋಲಿಸಿ ಮನೆಗೆ ಕಳಿಸುವವರೆಗೂ ತಾವು ಹಾಗೂ ಮಾಲೀಕಯ್ಯಾ ಗುತ್ತೇದಾರ್ ಜೋಡೆತ್ತಿನ ರೀತಿಯಲ್ಲಿ ದುಡಿಯುತ್ತೇವೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ತಿಳಿಸಿದ್ದಾರೆ. 

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮತ್ತು ಬಾಬುರಾವ್ ಚಿಂಚನಸೂರ್ ಜೋಡೆತ್ತುಗಳಿದ್ದಂತೆ. ಖರ್ಗೆ ಅವನತಿ ಆರಂಭವಾಗಿದ್ದು ಬರುವ ದಿನಗಳಲ್ಲಿ ಕಲಬುರಗಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.