ನವದೆಹಲಿ: ಲೋಕಸಭೆ ಚುಣಾವಣೆಗೆ ಕೇರಳದಲ್ಲಿ ಬಿಡಿಜೆಎಸ್‌ ಹಾಗೂ ಕೇರಳ ಕಾಂಗ್ರೆಸ್‌ ಜೊತೆ ಬಿಜೆಪಿ ಸೀಟು ಹಂಚಿಕೆ ಸೂತ್ರ ಅಂತಿಮಗೊಳಿಸಿದೆ. 

20 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 14 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಭಾರತ್‌ ಧರ್ಮ ಜನ ಸೇನಾ 5 ಹಾಗೂ ಪಿ.ಸಿ. ಥಾಮಸ್‌ ನೇತೃತ್ವದ ಕೇರಳ ಕಾಂಗ್ರೆಸ್‌ ಒಂದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 

ವಿಶೇಷವೆಂದರೆ ಬಿಜೆಪಿ ಜೊತೆ ಕೈಜೋಡಿಸಿರುವ ಕೇರಳ ಕಾಂಗ್ರೆಸ್‌ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಬಲವಾಗಿದೆ. ಈ ಪ್ರದೇಶಗಳಲ್ಲಿ ಪಕ್ಷಕ್ಕೆ ಕ್ರೈಸ್ತ ಸಮುದಾಯದ ಜನರೇ ಹೆಚ್ಚಿನ ಸದಸ್ಯರಾಗಿದ್ದಾರೆ. 

ಕೇರಳ ಕಾಂಗ್ರೆಸ್‌ ಹಲವು ಬಣಗಳಾಗಿ ವಿಭಜನೆಗೊಂಡಿದ್ದು, ಪಿ.ಸಿ. ಥಾಮಸ್‌ ಅವರ ಬಣದೊಂದಿಗೆ ಬಿಜೆಪಿ ಸೀಟು ಹಂಚಿಕೆ ಮಾಡಿಕೊಂಡಿದೆ. ಇದುವರೆಗೂ ಕೇರಳದಿಂದ ಬಿಜೆಪಿ ಸಂಸದರ ಆಯ್ಕೆಯಾಗಿಲ್ಲ.  ಇದೀಗ ಮಹಾಘಟಬಂಧನ್ ಹಿಂದಿಕ್ಕಿ ದೇಶದಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲು ಅನಿವಾರ್ಯತೆ ಎದುರಾಗಿದ್ದು, ಇಲ್ಲಿ ಬಿಜೆಪಿ ಮೈತ್ರಿ ಮೊರೆ ಹೋಗಿದೆ.