ನಟ ದರ್ಶನ್ ಮಂಡ್ಯ ಚುನಾವಣೆಯಲ್ಲಿ ಸುಮಲತಾಗೆ ಸಾಥ್ ನೀಡುತ್ತಿದ್ದಾರೆ. ಆದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿರುವ ಎ.ಮಂಜು ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ಬಿರುಸಿನ ಹೋರಾಟ ನಡೆಯುತ್ತಿದೆ. ಈ ಬೆನ್ನಲ್ಲೇ ಪ್ರಜ್ವಲ್ ಪರ ಪ್ರಚಾರಕ್ಕೆ ಹೋಗಲು ತಾವು ಸಿದ್ಧವೆಂದು ದಾಸ ದರ್ಶನ್ ಹೇಳಿದ್ದಾರೆ. ಆದರೆ....

 

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವಿರುದ್ಧ JDSನ ನಿಖಿಲ್ ಕುಮಾರ್‌ಸ್ವಾಮಿ ಕಣಕ್ಕಿಳಿಯಲಿದ್ದಾರೆ. ಸುಮಲತಾ ಪರ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಹಾಗೂ ರಾಖಿ ಬಾಯ್ ಯಶ್ ಫುಲ್ ಸಪೋರ್ಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಸುಮಲತಾಗೆ ಶುಭ ಕೋರಿದ್ದಾರೆ. ಒಟ್ಟಿನಲ್ಲಿ ಸುಮಲತಾ ಪರ ಇಡೀ ಸ್ಯಾಂಡಲ್‌ವುಡ್ ಇರುವುದು ಬಹುತೇಕ ಖಚಿತವಾಗಿದೆ.

ಪ್ರಜ್ವಲ್ ಗೆಲ್ಲಿಸಲು ಸಚಿವ ರೇವಣ್ಣ ಹೊಸ ತಂತ್ರ? ‘ಕೈ’ ಕಾಲಿಗೆ ಬಿದ್ದ ಪುತ್ರ!

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಒಂದು ಕ್ಷೇತ್ರದಲ್ಲಿ ಬಿಜೆಪಿ, ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ನಿಲ್ಲುತ್ತೀರಲ್ಲ?' ಎಂದು ಕೇಳಿದ ಪ್ರಶ್ನೆಗೆ, ‘ನನಗೆ ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ. ಒಳ್ಳೆ ವ್ಯಕ್ತಿ ಪರ ಪ್ರಚಾರ ಎಲ್ಲಿಬೇಕಾದರೂ ಮಾಡುತ್ತೀನಿ. ಮಂಡ್ಯದಲ್ಲಿ ಒಬ್ಬರ ಪರವಾಗಿ ಮಾತ್ರ ಪ್ರಚಾರ ಮಾಡೋಕೆ ಆಗೋದು... ’ ಎಂದರು.

 

'ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್‌ಗೆ ಬೆಂಬಲಿಸುತ್ತೀರಾ?'ಎಂಬ ಪ್ರಶ್ನೆಗೆ, ‘ಪ್ರಚಾರಕ್ಕೆ ಪ್ರಜ್ವಲ್ ರೇವಣ್ಣ ನನ್ನನ್ನು ಕರೆದರೆ ಖಂಡಿತಾ ತೆರಳುವೆ,’ ಎಂದು ಎಂದರು.

ಪತ್ರ ಬರೆದು ಮಂಡ್ಯ ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಸುಮಲತಾ

ಒಟ್ಟಿನಲ್ಲಿ ಸ್ಯಾಂಡಲ್‌ವುಡ್ ನಟರ ಸಾಥ್‌ನಿಂದ ಮಂಡ್ಯ ಚುನಾವಣಾ ಕಣ ರಂಗೇರಿದ್ದು, ಮೇ 23ಕ್ಕೆ ಮತದಾರ ಯಾರೆಡೆಗೆ ಒಲೆಯಲಿದ್ದಾನೆಂಬುವುದು ಬಹಿರಂಗಗೊಳ್ಳಲಿದೆ. ಅಂದ ಹಾಗೆ, ಕರ್ನಾಟಕದಲ್ಲಿ 16ನೇ ಲೋಕ ಸಮರಕ್ಕೆ ಎರಡು ಹಂತಗಳ ಚುನಾವಣೆ ನಡೆಯಲಿದ್ದು, ಏಪ್ರಿಲ್ 18 ಹಾಗೂ ಏ.23ಕ್ಕೆ ಮತದಾನ ನಡೆಯಲಿದೆ. ಮೇ 23ಕ್ಕೆ ಅಭ್ಯರ್ಥಿಗಳ ಭವಿಷ್ಯ ಬಹಿರಂಗಗೊಳ್ಳಲಿದೆ.