ಬೆಂಗಳೂರು[ಮಾ.15]: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ದೇಶ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು, ಕರ್ನಾಟಕದ ವಿವಿಧೆಡೆ ಅಧಿಕಾರಿಗಳು 76 ಲಕ್ಷ ರು. ಮೌಲ್ಯದ ಮದ್ಯ ಹಾಗೂ 20 ಲಕ್ಷ ರು. ನಗದು ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಗದಗ ಜಿಲ್ಲೆ ನರಗುಂದ ತಾಲೂಕು ಆಚಮಟ್ಟಿಚೆಕ್‌ಪೋಸ್ಟ್‌ನಲ್ಲಿ ಹಾಸನದಿಂದ ಗೋಕಾಕ್‌ಗೆ .76 ಲಕ್ಷ ಮೌಲ್ಯದ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ.

ಸೂಕ್ತ ದಾಖಲೆಗಳಿಲ್ಲದೇ ವಿಮಾನದ ಮೂಲಕ ಸಾಗಿಸುತ್ತಿದ್ದ .20 ಲಕ್ಷ ಹಣವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಫ್ಲೈಯಿಂಗ್‌ ಸ್ಕಾ$್ವಡ್‌ ವಶಕ್ಕೆ ತೆಗೆದುಕೊಂಡಿದೆ. ಈ ನಡುವೆ ವಾಹ​ನ​ವೊಂದ​ರಲ್ಲಿ ಸಾಗಿ​ಸುತ್ತಿದ್ದ ಸುಮಾರು .4.76 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭ​ರ​ಣ​ವನ್ನು ದಾವಣಗೆರೆ ನಗರದ ಪಿ.ಬಿ.​ರ​ಸ್ತೆಯ ರಿಲ​ಯನ್ಸ್‌ ಮಾರ್ಕೆಟ್‌ ಬಳಿ ಕೆಟಿಜೆ ನಗರ ಠಾಣೆಯ ಫ್ಲೈಯಿಂಗ್‌ ಸ್ಕಾ$್ವಡ್‌ನವರು ಜಪ್ತು ಮಾಡಿ​ದ್ದಾರೆ. ವಾಹನ ಹೊಸ​ಪೇ​ಟೆಯ ಚಿನ್ನಾ​ಭ​ರಣ ವ್ಯಾಪಾರಿ ಆರ್‌.​ಕೆ.​ಜೈನ್‌ ಅವರದ್ದಾಗಿದೆ.