ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ. ಮತದಾನಕ್ಕೆ ಒಂದೇ ದಿನ ಬಾಕಿ ಉಳಿದಿದೆ. 

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್  ಅವರಿಗೆ ಸೂಕ್ತ ಭದ್ರತೆಗೆ ಕೇಂದ್ರ ಭದ್ರತಾ ಪಡೆ ಸೇರಿ 50 ಪೊಲೀಸರನ್ನು ನಿಯೋಜಿಸ ಲಾಗಿದೆ. 

ಅಲ್ಲದೇ ಮಂಡ್ಯದಲ್ಲೇ ದಕ್ಷಿಣ ವಲಯ ಐಜಿಪಿ ಅವರು ಮೊಕ್ಕಾಂ ಹೂಡಿ ಆ ಕ್ಷೇತ್ರದ ಭದ್ರತೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಎಡಿಜಿಪಿ ಕಮಲ್ ಪಂತ್ ತಿಳಿಸಿದರು. ಚುನಾವಣಾ ಆಯೋಗಕ್ಕೆ ಭದ್ರತೆ ಕೋರಿ ಸುಮಲತಾ ಮನವಿ ಮಾಡಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.