Asianet Suvarna News Asianet Suvarna News

1 ಮತಕ್ಕೆ 2500 ರು. ಬೆಲೆ! ಸಂಸದನ ಹೇಳಿಕೆ

ಚುನಾವಣೆಗಾಗಿ ವಿವಿಧ ರೀತಿಯ ವಸ್ತುಗಳನ್ನು ಹಂಚುವಂತೆ ಇಲ್ಲಿ ಒಂದು ಮತಕ್ಕೆ ಬರೋಬ್ಬರಿ 2500 ರು ನೀಡಿದ್ದಾಗಿ ಸ್ವತಃ ಸಂಸದರೆ ಬಾಯಿ ಬಿಟ್ಟಿದ್ದಾರೆ. 

Loksabha Elections 2019 2500 For 1 Vote In Andhra Pradesh
Author
Bengaluru, First Published Apr 23, 2019, 8:01 AM IST

ಹೈದರಾಬಾದ್‌: ಯಾವುದೇ ಚುನಾವಣೆ ಗೆಲುವಿಗಾಗಿ ಮತದಾರರಿಗೆ ಹಣ, ಹೆಂಡ, ಸೀರೆ, ಕುಕ್ಕರ್‌ ಸೇರಿ ಇನ್ನಿತರ ವಸ್ತುಗಳನ್ನು ರಾಜಕೀಯ ಮುಖಂಡರು ನೀಡುವುದು ಅಘೋಷಿತ ಸತ್ಯ ಎಂಬುದು ಗೊತ್ತು.

ಆದರೆ, ಆಂಧ್ರಪ್ರದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ಹಣ ಕೊಟ್ಟು ಖರೀದಿಸುತ್ತವೆ. ಈ ಚುನಾವಣೆಯಲ್ಲಿ 2000-2500 ರು.ವರೆಗೂ ಸಾರ್ವಜನಿಕರ ಮತವು ಬಿಕರಿಯಾಗಿತ್ತು ಎಂದು ಆಡಳಿತಾರೂಢ ಪಕ್ಷ ಟಿಡಿಪಿ ಸಂಸದ ಜೆ.ದಿವಾಕರ್‌ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಚುನಾವಣೆ ಗೆಲುವಿಗಾಗಿ ಟಿಡಿಪಿ ಸೇರಿದಂತೆ ಎಲ್ಲ ಪಕ್ಷಗಳು ಕನಿಷ್ಠ 10000 ಕೋಟಿ ರು. ಖರ್ಚು ಮಾಡಿವೆ ಎಂದಿದ್ದಾರೆ.

ಆಂಧ್ರಪ್ರದೇಶದಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಬೆಳ್ಳಿ, ಚಿನ್ನಾಭರಣ ಮತ್ತು ಮದ್ಯ ಸೇರಿದಂತೆ ಒಟ್ಟು 200 ಕೋಟಿ ರು. ಮೌಲ್ಯ ಹಣ ಜಪ್ತಿ ಮಾಡಿದ ಬೆನ್ನಲ್ಲೇ, ಟಿಡಿಪಿ ಸಂಸದ ಜೆ.ದಿವಾಕರ್‌ ರೆಡ್ಡಿ ನೀಡಿದ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಬಗ್ಗೆ ಸೋಮವಾರ ಮಾತನಾಡಿದ ದಿವಾಕರ್‌ ರೆಡ್ಡಿ ಅವರು, ‘ಚುನಾವಣೆ ರಾರ‍ಯಲಿಗೆ ಹೋದಾಗ ಜನರು ಹಣ ನೀಡುವಂತೆ ನೇರವಾಗಿ ಕೇಳುತ್ತಾರೆ. ಇತರೆ ಪಕ್ಷದ ನಾಯಕರು ತಮಗೆ 2000 ರು. ನೀಡಿದ್ದು, ನಾವು 2500 ರು. ನೀಡಬೇಕು ಎಂದು ಬೇಡಿಕೆಯಿಡುತ್ತಾರೆ. ಹೀಗಾಗಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಒಂದು ಪಕ್ಷ 50 ಕೋಟಿ ರು. ವರೆಗೂ ಖರ್ಚು ಮಾಡುತ್ತದೆ. ಈ ಪ್ರಕಾರ ಎಲ್ಲ ಪಕ್ಷಗಳ ಒಟ್ಟು ವೆಚ್ಚ 10 ಸಾವಿರ ಕೋಟಿ ರು. ಆಗಲಿದೆ. ಈ ಎಲ್ಲ ಹಣ ಭ್ರಷ್ಟಾಚಾರದಿಂದ ಬಂದಿದೆ’ ಎಂದು ಕಿಡಿಕಾರಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

 

Follow Us:
Download App:
  • android
  • ios