ನವದೆಹಲಿ :  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಈಗಾಗಲೇ ಬಿಜೆಪಿ ತಮ್ಮ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಮೊದಲ ಪಟ್ಟಿಯಲ್ಲಿ ಕರ್ನಾಟಕದ 21, ಬಂಗಾಳದ 28, ಮಹಾರಾಷ್ಟ್ರದ 16 ಅಭ್ಯರ್ಥಿಗಳು ಸೇರಿ 184 ಅಭ್ಯರ್ಥಿಗಳ ಘೋಷಣೆಯಾಗಿದೆ. ಇವರಲ್ಲಿ ಛತ್ತೀಸ್‌ಗಢದ 5 ಸಂಸದರು, ಎಲ್.ಕೆ. ಅಡ್ವಾಣಿ ಸೇರಿ 25 ಹಾಲಿ ಸಂಸದರಿಗೆ ಟಿಕೆಟ್ ಲಭ್ಯವಾಗಿಲ್ಲ. 

ಮಾಜಿ ಕೇಂದ್ರ ಸಚಿವ ರಾಮ್‌ಶಂಕರ್ ಕಠೇರಿಯಾ, ಉತ್ತರಾಖಂಡ ಮಾಜಿ ಸಿಎಂಗಳಾದ ಬಿ.ಸಿ. ಖಂಡೂರಿ ಹಾಗೂ ಭಗತ್ ಸಿಂಗ್ ಕೋಶಿಯಾರಿ ಅವರಿಗೂ ಟಿಕೆಟ್ ಲಭ್ಯವಾಗಿಲ್ಲ.

ಅಲ್ಲದೇ ಕೇಂದ್ರ ಸಚಿವ ಉತ್ತರ ಪ್ರದೇಶ ಮೂಲದ ಕೃಷ್ಣ ರಾಜ್ ಅವರಿಗೂ ಕೂಡ ಮೊದಲ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದೆ.