ಬೆಂಗಳೂರು[ಮಾ.19] ರಾಜ್ಯದ ಇಬ್ಬರು ಪ್ರಭಾವಿ ಸಂಸದರ ಮೇಲೆ ತೂಗುಗತ್ತಿ ಇದೆ. ಟಿಕೆಟ್ ಸಿಗುವ ಸಾಧ್ಯತೆ ನಿಚ್ಚಳವಾಗಿದ್ದರೂ ಟಿಕೆಟ್ ಕೊಡುವ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇದೆ.

ಇಬ್ಬರು ಸಂಸದರ ಕಾರ್ಯವೈಖರಿ ಬಗ್ಗೆ ರಾಜ್ಯ ನಾಯಕರಿಂದಲೇ ಅಸಮಾಧಾನ ಕೇಳಿ ಬಂದಿದೆ. ಉತ್ತರ ಕನ್ನಡ ಸಂಸದ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇಬ್ಬರ ಭವಿಷ್ಯ ಪ್ರಧಾನಿ ನರೇಂದ್ರ ಮೋದಿ ಕೈನಲ್ಲಿದೆ.

ತುಮಕೂರಿನ ಕೈ ಟಿಕೆಟ್ ಮಾರಾಟವಾಯ್ತು: ಕೆಪಿಸಿಸಿ ಮಾಜಿ ಸದಸ್ಯ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆಗಿನ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ವಸ್ತು ಸ್ಥಿತಿ ಬಗ್ಗೆ  ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸಿ. ಟಿ. ರವಿ, ಸಂತೋಷ್ ಮತ್ತು ರಾಮ್ ಲಾಲ್ ಮಾಹಿತಿ ನೀಡಿದ್ದಾರೆ.