ಬೆಂಗಳೂರು : ಲೋಕಸಭಾ ಮಹಾಸಮರ ರಾಜ್ಯದಲ್ಲಿ ಆರಂಭವಾಗಿದೆ. 2ನೇ ಹಂತದ ಚುನಾವಣೆ ರಾಜ್ಯದಲ್ಲಿ ಭರದಿಂದ ಸಾಗಿದೆ.  ಜನರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. 

ಇತ್ತ ತುಮಕೂರಿನ ಹುಳಿಯಾರಿಯಲ್ಲಿ ಶತಾಯುಷಿಯೋರ್ವರು ಮತ ಚಲಾಯಿಸಿದ್ದಾರೆ.  103 ವರ್ಷದ ಶ್ರೀನಿವಾಸ ಶೆಟ್ಟರು ಮೊಮ್ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. 

ಇನ್ನು ತಿಪಟೂರು ತಾಲೂಕು ಕಸಬಾ ಹೋಬಳಿಯಲ್ಲಿ 105 ವರ್ಷದ ಶತಾಯುಷಿಯೊಬ್ಬರು ಮತ ಚಲಾವಣೆ ಮಾಡಿದ್ದಾರೆ. ಇಲ್ಲಿನ  ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 35 ಸಿದ್ದಾಪುರದಲ್ಲಿ 105 ವರ್ಷದ ಚಿಕ್ಕಮ್ಮ ಮತದಾನ ಮಾಡಿದರು. 

ಶತಾಯುಷಿಗಳು ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ಯುವಜನತೆಗೆ ಮಾದರಿಯಾದರು.  

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.