ಶಿವಮೊಗ್ಗ(ಮಾ.21]  ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಲಾವಕಾಶ ಕಡಿಮೆ ಇದ್ದ ಕಾರಣಕ್ಕೆ ಸೋಲಬೇಕಾಯಿತು. ಆ ಸೋಲು ಅನೇಕ ಪಾಠ ಕಲಿಸಿಕೊಟ್ಟಿದ್ದು  ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ ಎಂದು ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ  ಹೇಳಿದರು.

ಶಿವಮೊಗ್ಗಕ್ಕೆ ಡಿಕೆಶಿ ಉಸ್ತುವಾರಿ ಇಲ್ಲ, ಎಲ್ಲಾ ಕ್ಷೇತ್ರಗಳಿಗೂ ಅವರ ಅಗತ್ಯವಿದೆ. ಆದರೆ ವಿಶೇಷ ಗಮನ ಹರಿಸಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಬಂಗಾರಪ್ಪ ಪುತ್ಥಳಿ ನಿರ್ಮಾಣದ ಬಗ್ಗೆ ಕೇಳಬೇಡಿ . ನಮ್ಮ ವೈಯಕ್ತಿಕ ವಿಷಯ ಕೆದಕಬೇಡಿ . ಬಿಜೆಪಿಯವರಿಗೆ ಅಪಪ್ರಚಾರ ಮಾಡೋದೆ ದೊಡ್ಡ ರೋಗ ಎಂದು ಪರೋಕ್ಷವಾಗಿ ಕುಮಾರ್ ಬಂಗಾರಪ್ಪ ವಿರುದ್ಧ ಹರಿಹಾಯ್ದರು.

ಕಿಮ್ಮನೆ ರತ್ನಾಕರ್ ರವರು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ಜೊತೆಗೆ ವೇದಿಕೆ ಹಂಚಿಕೊಳ್ಳೋಲ್ಲ ಎಂದಿರುವ ಬಗ್ಗೆ  ನನಗೆ ಗೊತ್ತಿಲ್ಲ. ಈ ವಿಚಾರವನ್ನು ಅವರ ಬಳಿಯೇ ಕೇಳಿ ಎಂದು ಹೇಳಿದರು.