ಅಂತಿಮ ಹಂತಕ್ಕೆ ಬಂದು ತಲುಪಿದ ಲೋಕಸಭೆ ಚುನಾವಣೆ|ಏಳನೇಯ ಹಂತದ ಮತದಾನಕ್ಕೆ ಸಜ್ಜಾಗಿರುವ ಭಾರತ| ಮೇ.23ರ ಮಹಾ ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿರುವ ಮತದಾರ| ಲೋಕಸಭೆ ಚುನಾವಣೆಯ ಇಂಚಿಂಚು ಮಾಹಿತಿ ನೀಡಿದ ನಿಮ್ಮ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ| ಮೇ.23 ರ ಫಲಿತಾಂಶಕ್ಕಾಗಿ ಸರ್ವ ಸನ್ನದ್ಧವಾಗಿದೆ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ| ವೀಕ್ಷಕರು ಮತ್ತು ಓದುಗರಿಗೆ ಕ್ಷಣ ಕ್ಷಣದ ಮಾಹಿತಿ ನೀಡಲು ನಾವು ರೆಡಿ|
ಬೆಂಗಳೂರು(ಮೇ.17): 2019ರ ಲೋಕಸಭೆ ಚುನಾವಣೆ ಅಂತಿಮ ಹಂತಕ್ಕೆ ಬಂದು ತಲುಪಿದೆ. 6 ಹಂತದ ಮತದಾನ ಪೂರ್ಣಗೊಳಿಸಿರುವ ಭಾರತ, ಇದೀಗ 7ನೇಯ ಮತ್ತು ಕೊನೆಯ ಹಂತದ ಮತದಾನಕ್ಕೆ ಸಜ್ಜಾಗಿದೆ.
ಇನ್ನು ಮೇ.23ರ ಮಹಾಸಮರದ ಮಹಾ ಫಲಿತಾಂಶಕ್ಕೆ ದೇಶ ಕಾತರದಿಂದ ಎದುರು ನೋಡುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಕುರ್ಚಿ ಯಾರಿಗೆ ಒಲಿಯಲಿದೆ. ದೇಶದ ಭವಿಷ್ಯವನ್ನು ಮತದಾರ ಯಾರ ಕೈಗೆ ಕೊಡಲಿದ್ದಾನೆ ಎಂಬಿತ್ಯಾದಿ ಚರ್ಚೆಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ.
ಅದರಂತೆ ಲೋಕಸಭೆ ಚುನಾವಣೆಯ ಇಂಚಿಂಚು ಮಾಹಿತಿಯನ್ನು ವೀಕ್ಷಕರು ಮತ್ತು ಓದುಗರಿಗೆ ನೀಡಿದ ಹೆಮ್ಮೆ ನಿಮ್ಮ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ ಗೆ ಇದೆ. ಬರೋಬ್ಬರಿ ಒಂದುವರೆ ತಿಂಗಳಿನಿಂದ ನಿರಂತರವಾಗಿ ಮಹಾಸಮರದ ಎಲ್ಲಾ ಘಟನಾವಳಿಗಳನ್ನು ನಮ್ಮ ಹೆಮ್ಮೆಯ ವೀಕ್ಷಕರು ಮತ್ತು ಓದುಗರಿಗೆ ನಾವು ಉಣಬಡಿಸಿದ್ದೇವೆ.
ಲೋಕಸಭೆ ಚುನಾವಣೆ ಘೋಷಣೆಯಾದ ದಿನಾಂಕದಿಂದ ಹಿಡಿದು, ಇಂದಿನವರೆಗೆ ತನ್ನ ವೀಕ್ಷಕರು ಮತ್ತು ಓದುಗರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ, ಇದೀಗ ಮೇ.23ರ ಫಲಿತಾಂಶದ ದಿನಕ್ಕಾಗಿ ಸರ್ವ ಸನ್ನದ್ಧವಾಗಿ ಕುಳಿತಿದೆ.
ಕೇವಲ ರಾಜ್ಯದ ಚುನಾವಣಾ ಆಗುಹೋಗುಗಳಷ್ಟೇ ಅಲ್ಲದೇ, ರಾಷ್ಟ್ರೀಯ ಮಟ್ಟದ ಸುದ್ದಿಗಳಿಗೂ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ ಮಹತ್ವ ನೀಡಿದ್ದು, ಚುನಾವಣಾ ಸುದ್ದಿಗಳಿಗಾಗಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಉತ್ತರಪ್ರದೇ, ದೆಹಲಿ, ಪ.ಬಂಗಾಳ ಸೇರಿದಂತೆ ಹಲವು ಪ್ರಮುಖ ರಾಜ್ಯಗಳಿಗೆ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ ತಂಡ ಭೇಟಿ ನೀಡಿದೆ.
ಮೇ.23ರ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ವೀಕ್ಷಕರು ಮತ್ತು ಓದುಗರಿಗೆ ಉಣಬಡಿಸಲು ಸಜ್ಜಾಗಿರುವ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ, ಕೇವಲ ಕ್ಷೇತ್ರವಾರು ಫಲಿತಾಂಶ ಮಾತ್ರವಲ್ಲದೇ ವಿಶ್ಲೇಷಣೆ, ತಜ್ಞರ ಅಭಿಮತ, ಫಲಿತಾಂಶದ ಪರಿಣಾಮಗಳ ಕುರಿತು ದಿನವೀಡಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.
ಹೀಗಾಗಿ ಇಡೀ ದೇಶ ಕಾತರದಿಂದ ಕಾಯುತ್ತಿರುವ ಮೇ.23ರ ಲೋಕಸಭೆ ಚುನಾವಣೆಯ ಫಲಿತಾಂಶದ ದಿನದಂದು ಕರುನಾಡಿನ ನಮ್ಮ ಹೆಮ್ಮೆಯ ವೀಕ್ಷಕರು ಮತ್ತು ಓದುಗರು ನಮ್ಮೊಂದಿಗೆ ಇರುವಭರವಸೆ ನಮಗಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated May 17, 2019, 12:34 PM IST