ಬೆಂಗಳೂರು[ಮಾ. 13]  ದೋಸ್ತಿಗಳಲ್ಲಿ ಸೀಟು ಹಂಚಿಕೆ ಫೈನಲ್ ಆಗಿದ್ದು ಕಾಂಗ್ರೆಸ್ ಗೆ 20 ಮತ್ತು ಜೆಡಿಎಸ್ ಗೆ 8 ಕ್ಷೇತ್ರಗಳು ಲಭ್ಯವಾಗಿದೆ. 

ಮೈಸೂರನ್ನು ಜೆಡಿಎಸ್ ಕೇಳಿಕೊಂಡೇ ಬಂದಿತ್ತು. ಆದರೆ ಸಿದ್ದರಾಮಯ್ಯ ಅಂತಿಮವಾಗಿ ಮೈಸೂರನ್ನು ಕಾಂಗ್ರೆಸ್ ಬಳಿಯೇ ಉಳಿಸಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಹೆಚ್ಚಿನ ಕಾಲವನ್ನು ಬದಾಮಿಗೆ ಮೀಸಲಿಟ್ಟಿದ್ದರು.

ದೋಸ್ತಿ ಸೀಟು ಹಂಚಿಕೆ ಫೈನಲ್: ಕಾಂಗ್ರೆಸ್ ಗೆ 20, JDSಗೆ 8 ಸ್ಥಾನ..!

ಆದರೆ ಈ ಎಲ್ಲದನ್ನು ಮೀರಿ ಹಳೆ ಮೈಸೂರು  ಭಾಗದಲ್ಲಿ ಮತ್ತೆ ಸಿದ್ದರಾಮಯ್ಯ ವಿಜೃಂಭಿಸಿದ್ದಾರೆ. ಮೈಸೂರಿನ ಬದಲು ಜೆಡಿಎಸ್ ಗೆ ತುಮಕೂರು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ವಿಜಯ್ ಶಂಕರ್ ಅವರನ್ನು ಬಿಜೆಪಿಯಿಂದ ಕರೆತರಲಾಗಿದ್ದು ಅವರಿಗೆ ಟಿಕೆಟ್ ಕೊಡುವ ಮಾತನ್ನು ಸಿದ್ದರಾಮಯ್ಯ ನೀಡಿದ್ದರು.