ತುಮಕೂರು: ಜೆಡಿಎಸ್‌ಗೆ 8, 12, 18 ಕ್ಷೇತ್ರ ಬಿಟ್ಟು ಕೊಟ್ಟರೂ ಅವರು ಗೆಲ್ಲೋದು ಕೇವಲ 2 ರಿಂದ 3 ಸೀಟು ಮಾತ್ರ ಎಂದು ಭವಿಷ್ಯ ಹೇಳಿರುವ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಒಂದು ವೇಳೆ 3 ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ತಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಶಪಥ ಮಾಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ, ಹಾಸನಗಳಲ್ಲೂ ಜೆಡಿಎಸ್‌ಗೆ ಗೆಲುವು ಸುಲಭವಿಲ್ಲ ಎಂದರು. ತುಮಕೂರಿನ ಸೀಟು ಹಂಚಿಕೆ ವಿಚಾರ ಮಾ. 16 ರಂದು ಅಂತಿಮವಾಗಲಿದೆ. 

ಒಂದು ವೇಳೆ ತುಮಕೂರಿನಲ್ಲಿ ಜೆಡಿಎಸ್‌ಗೆ ಟಿಕೆಟ್ ಕೊಟ್ಟರೆ ಪಕ್ಷೇತರನಾಗಿ ಸ್ಪರ್ಧಿಸುವೆ. ಹಾಸನ, ಮಂಡ್ಯ, ಬೆಂಗಳೂರಿನ ರಾಜಕೀಯ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದು, ನಾವೆಲ್ಲರೂ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.