ಮಂಡ್ಯ[ಮಾ. 11] ಮಂಡ್ಯದ ಖಾಸಗಿ ಹೊಟೆಲ್ ನಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಾಐಕರು ಭೇಟಿ ಮಾಡಿದ್ದಾರೆ. ಭೇಟಿ ನಂತರ ಹೇಳಿಕೆಯನ್ನು ನೀಡಿದ್ದಾರೆ. ಏನು ಹೇಳಿದರು ನೀವೇ ನೋಡಿಕೊಂಡು ಬನ್ನಿ.

ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ[ಜೆಡಿಎಸ್] ‘ನಾನು ಊಟಕ್ಕೆ ಹೊಟೆಲ್ ಗೆ ಬಂದಿದ್ದೆ. ಯಾವುದೇ ನಾಯಕರನ್ನ ಭೇಟಿ ಮಾಡಲು ಬಂದಿಲ್ಲ. ನಾನು ಹೊಟೆಲ್ ಗೆ ಬಂದಾಗ ಚೆಲುವರಾಯಸ್ವಾಮಿ, ಬಾಲಕೃಷ್ಣ ಪ್ರಮುಖ ನಾಯಕರು ಇದ್ದರು. ಅವರ ಬಳಿ ಉಭಯ ಕುಶಲೋಪರಿ ವಿಚಾರಿಸಿದ್ದೇನೆ.

ಮಾಜಿ ಸಚಿವ ಚೆಲುವರಾಯಸ್ವಾಮಿ[ಕಾಂಗ್ರೆಸ್] : ನಾನು ಈ ಹೋಟೆಲ್ ಗೆ ಬರೋದು ಸಾಮಾನ್ಯ. ನಾನು ಬಂದಾಗ ಬಿಜೆಪಿ ನಾಯಕರು ಬಂದಿದ್ದಾರೆ.  ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ. ನಾನು ಹೋಟೆಲ್ ನಲ್ಲಿ ಯಾವುದೇ ಸಭೆ ಮಾಡಿಲ್ಲ. ಬಿಜೆಪಿಯಲ್ಲೂ ನನ್ನ ಸ್ನೇಹಿತರು ಇದ್ದಾರೆ. ನಾನು ಯಾರಿಗೂ ವೈರಿ ಅಲ್ಲ.

ಚುನಾವಣಾ ಪ್ರಚಾರಕ್ಕೆ ಹೊಸ ಫೇಸ್‌ಬುಕ್ ಪೇಜ್ ತೆರೆದ ಸುಮಲತಾ

ರಾಜುಗೌಡ [ಬಿಜೆಪಿ ಮುಖಂಡ] : ಇದೊಂದು ಸಹಜ ಮಾತುಕತೆ  ಅಷ್ಟೇ. ಜೆಡಿಎಸ್ ಸಂಸದ ಶಿವರಾಮೇ ಗೌಡರು ಬಂದಿದ್ರು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಆರ್.‌ಅಶೋಕ್  ಎಸ್.ಎಂ. ಕೃಷ್ಣ ಭೇಟಿಯಾಗಿ ಬಂದಿದ್ದಾರೆ. ಸುಮಲತಾ ಕುರಿತಾಗಿ ಯಾವುದೇ ತೀರ್ಮಾನ ಆಗಿಲ್ಲ. ಬೆಂಬಲ ಕುರಿತಾಗಿ ಯಾವುದೇ ತೀರ್ಮಾನ ಇಲ್ಲ. ತ್ರಿಕೋನ ಸ್ಪರ್ಧೆ ನಡೆದರೆ ನಮ್ಮ ಅಭ್ಯರ್ಥಿ ಗೆಲ್ಲೋ ಸಾಧ್ಯತೆ ಇದೆ. ಗುಲ್ಬರ್ಗದಲ್ಲಿ ಉಮೇಶ್ ಜಾಧವ್ ಪ್ರಭಲ ಅಭ್ಯರ್ಥಿ. ಅವರು ಗೆಲ್ಲುವ  ಶ್ವಾಸ ನಮಗಿದೆ. ಕಾನೂನು ಸಲಹೆ ಪಡೆದುಕೊಂಡು ರಾಜೀನಾಮೆ ಕೊಟ್ಟಿದ್ದಾರೆ. ಸ್ಪೀಕರ್ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸ ಇದೆ.

ಮಾಜಿ ಉಪಸಭಾಪತಿ ಪುಟ್ಟಣ್ಣ ಹೇಳಿಕೆ; 
ನಾವು ರೆಗ್ಯುಲರ್ ಆಗಿ ಹೊಟೇಲ್ ಗೆ ಊಟಕ್ಕೆ ಬರುತ್ತೇವೆ. ಇವತ್ತು ಆಕಸ್ಮಿಕವಾಗಿ ಬಿಜೆಪಿ ನಾಯಕರು ಬಂದಿದ್ದಾರೆ. ಊಟ ಅಂದ ಮೇಲೆ ರಾಜಕೀಯ ಚರ್ಚೆ ನಡೆಯುತ್ತೆ. ಆದರೆ ಅಂತ ವಿಶೇಷ ಚರ್ಚೆಯನ್ನ ನಾವು ಮಾಡಿಲ್ಲ.

ಮಾಹಿತಿ: ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗಿದ್ದು ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23 ರಂದು 2 ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 16 ಬಿಜೆಪಿ, 10 ಕಾಂಗ್ರೆಸ್ ಮತ್ತು 2 ಜೆಡಿಎಸ್ ಬಲಾಬಲ ಇದೆ.