ಮಂಡ್ಯ[ಮಾ. 11]  ಭಾರೀ ಕುತೂಹಲ ಮೂಡಿಸಿದ ಮಂಡ್ಯ ರಾಜಕಾರಣದಲ್ಲಿ ವಿವಿಧ ಪಕ್ಷಗಳ ನಾಯಕರ ನಡೆಯೂ ಮಹತ್ವ ಪಡೆದುಕೊಂಡಿದೆ.

ಇದೆಲ್ಲದರ ನಡುವೆ ಮೂರು ಪಕ್ಷಗಳ ನಾಯಕರು ಒಂದೇ ಕಡೆ ಸೇರಿ ಸಭೆ ನಡೆಸಿರುವುದು ಕುತೂಹಲ ಹೆಚ್ಚು ಮಾಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಹೊಸ ಫೇಸ್‌ಬುಕ್ ಪೇಜ್ ತೆರೆದ ಸುಮಲತಾ

ಹಾಲಿ ಶಾಸಕರು, ಹಾಲಿ ಎಂಪಿ ಪರಸ್ಪರ ಭೇಟಿಯಾಗಿದ್ದಾರೆ. ಬಿಜೆಪಿ ನಾಯಕರನ್ನು ಖಾಸಗಿ ಹೊಟೇಲ್‌ನಲ್ಲಿ ಭೇಟಿ ಮಂಡ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಭೇಟಿ ಮಾಡಿದ್ದಾರೆ. ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಹಾಲಿ ಎಂಪಿ ಎಲ್. ಆರ್.ಶಿವರಾಮೇಗೌಡ ಮತ್ತು ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದು ಯಾವ ಚರ್ಚೆ ಮಾಡಿದ್ದಾರೆ ಎನ್ನುವುದು ಮಹತ್ವ ಪಡೆದುಕೊಂಡಿದೆ.