ಬೆಂಗಳೂರು: ರಾಜ್ಯದಲ್ಲಿ ಏ.18ರಂದು ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ಭರಾಟೆ ಉತ್ತುಂಗಕ್ಕೇರಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿಗಳು ಇಂದು ರಾಜ್ಯಕ್ಕಾಗಮಿಸುತ್ತಿದ್ದು, ಒಟ್ಟಾರೆ ಐದು ಬೃಹತ್‌ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ವಿವರ ಇಲ್ಲಿದೆ.

ಇಂದು ಮಂಗಳೂರು, ಬೆಂಗಳೂರಿನಲ್ಲಿ ಮೋದಿ ಸಮಾವೇಶ

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಕರ್ನಾಟಕಕ್ಕೆ ಈಗಾಗಲೇ ಎರಡು ಬಾರಿ ಭೇಟಿ ನೀಡಿ ಮೂರು ಪ್ರಚಾರ ರಾರ‍ಯಲಿಗಳಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತ್ತೆ ರಾಜ್ಯಕ್ಕಾಗಮಿಸುತ್ತಿದ್ದು, ಇನ್ನೂ ಎರಡು ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಏ.9ರಂದು ಚಿತ್ರದುರ್ಗ, ಮೈಸೂರು ಹಾಗೂ ಶುಕ್ರವಾರವಷ್ಟೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಶನಿವಾರ ಕರಾವಳಿ ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಗಾ ಪ್ರಚಾರ ರಾರ‍ಯಲಿಗಳಲ್ಲಿ ಭಾಗವಹಿಸಲಿದ್ದಾರೆ. ನರೇಂದ್ರ ಮೋದಿ ಪ್ರವಾಸದ ವಿವರ ಇಂತಿದೆ.

ಅಪರಾಹ್ನ 2.20: ತಮಿಳುನಾಡಿನಲ್ಲಿ ಪ್ರಚಾರ ಮುಗಿಸಿ ಮಂಗಳೂರಿಗೆ ಆಗಮನ. ಮಂಗಳೂರು ಕೇಂದ್ರ ಮೈದಾನದಲ್ಲಿ ಪ್ರಚಾರ

ಸಂಜೆ 4.45 ಗಂಟೆ: ಬಳಿಕ ಬೆಂಗಳೂರಿಗೆ ಆಗಮನ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಬಿಜೆಪಿ ಸಮಾವೇಶದಲ್ಲಿ ಭಾಗಿ