ದಾವಣಗೆರೆ[ಮೇ. 24]  ಬಿಜೆಪಿಯವರ ದುಡ್ಡು ಎಲ್ಲಾ ಕಡೆ ಕೆಲಸ ಮಾಡಿದೆ ಅದೇ ಕಾರಣಕ್ಕೆ ಅಷ್ಟು ಸೀಟು ಬಂದಿದೆ ಎಂದು ದಾವಣಗೆರೆಯಲ್ಲಿ  ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಆಯುಷ್ಯದ ಬಗ್ಗೆ ಇನ್ನು ಒಂದು ವಾರ ಕಾಯ್ದು‌ನೋಡಬೇಕು. ಹೋಗುವವರ ಸಂಖ್ಯೆ ಮೇಲೆ‌ ಸರ್ಕಾರದ ಭವಿಷ್ಯ ಇದೆ ಎಂದರು.

ಖರ್ಗೆಯವರು ಸೋಲಿನ ಬಗ್ಗೆ ಪ್ರತಿಕ್ರಿಯಿಸಿ  ಇಂದಿರಾಗಾಂಧಿಯವರು ಸೋತಿದ್ದಾರೆ. ಮುಂದೆ ಮೋದಿಯವರು ಸೋಲುತ್ತಾರೆ.  ಈಗ ಅವರ  ಕಾಲ ಮುಂದೆ ನಮ್ಮ ಕಾಲ ಬರಲಿದೆ ಎಂದರು.

ಜನಾಭಿಪ್ರಾಯವನ್ನು ಬಿಜೆಪಿ ಪರವಾಗಿಗಿದೆ  ಅದನ್ನು ಒಪ್ಪಿಕೊಂಡು ಸ್ವಾಗತಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಇದೇ ವೇಳೆ ಹೇಳಿದರು.