ಧಾರವಾಡ :  ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಫೇಸ್ಬುಕ್ ಪಾಲಿಟಿಕ್ಸ್ ರಂಗೇರುತ್ತಿದೆ.  ಟಿಕೆಟ್ ಫೈನಲ್ ಆಗುವ ಮುನ್ನವೇ ವಿನಯ್ ಕುಲಕರ್ಣಿ ಪರ ಭರ್ಜರಿ ಪ್ರಚಾರ ಆರಂಭವಾಗಿದೆ. 

 ಜೋಶಿ ಸೋಲಿಸಿ, ವಿನಯ್ ಕುಲಕರ್ಣಿ ಗೆಲ್ಲಿಸಿ ಎಂದು ಬೆಂಬಲಿಗರು ಪೋಸ್ಟ್ ಹಾಕುತ್ತಿದ್ದು, ಪ್ಲಾಸ್ಟಿಕ್ ಆಕಳು ಪೂಜೆ ಮಾಡುವ ನಕಲಿ ಗೋರಕ್ಷಕರು ಬೇಕಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

ಅಲ್ಲದೇ ವಿನಯ್ ಕುಲಕರ್ಣಿ ಪರವಾಗಿ 2000 ಗೋವುಗಳನ್ನು ಮಕ್ಕಳಂತೆ ಸಾಕುವ ನಿಜವಾದ ಗೋಪಾಲಕಗೆ ಬೆಂಬಲ ನೀಡಿ ಎಂದು ಹಾಲಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ  ಕೈ ಕಾರ್ಯಕರ್ತರು ವ್ಯಂಗ್ಯವಾಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. 

ಬಿಜೆಪಿ ವ್ಯಂಗ್ಯ : ಕಾಂಗ್ರೆಸ್ ಕಾರ್ಯಕರ್ತರ ಫೇಸ್ ಬುಕ್ ಪಾಲಿಟಿಕ್ಸ್ ಕಂಡು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡುತ್ತಿದ್ದು, ಪ್ರತಿಯಾಗಿ ಕ್ಯಾಂಪೇನ್ ನಡೆಸಿದ್ದಾರೆ. ಕರ್ನಾಟಕದಲ್ಲಿ ಕಮಲ ಅರಳುವುದು ಖಚಿತ. ಜೈ ನಮೋ ಎಂದು ಹೇಳುತ್ತಿದ್ದಾರೆ.