ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರ ಮುಂದುವರಿದಿದೆ. ವರ ಪ್ರಚಾರ ಎಲ್ಲಿಯವರೆಗೂ ತಲುಪಿದೆ ಇಲ್ಲಿದೆ..
ಮಂಡ್ಯ : ಮಕ್ಕಳೇ, ನೀವೆಲ್ಲಾ ಚೆನ್ನಾಗಿ ಎಕ್ಸಾಮ… ಬರೆದ್ರಾ?
- ಹೌದು ಮೇಡಂ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
-ಪರೀಕ್ಷೆಯಲ್ಲಿ ಪಾಸ್ ಆಗ್ತೀರಾ ಅಲ್ವಾ?
- ಹೌದು ಮೇಡಂ
- ನನಗೂ ಎಕ್ಸಾಂ ಇದೆ, ನಾನು ಪಾಸಾಗಬೇಕು. ನಿಮ್ಮ ತಾಯಿ-ತಂದೆಗಳೆ ನನಗೆ ವ್ಯಾಲೂವೇಟರ್‌ಗಳು. ನೀವೆಲ್ಲಾ ಅವರಿಂದ ಮತ ಹಾಕಿಸಿ ಪಾಸ್ ಮಾಡಿಸಿ ಪ್ಲೀಸ್ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರ ವೇಳೆ ಮಕ್ಕಳೊಂದಿಗೆ ಆಡಿದ ಸಂಭಾಷಣೆಯ ತುಣುಕುಗಳಿವು.
ಕೆಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ತೆಂಡೆಕೆರೆಗೆ ಗ್ರಾಮಕ್ಕೆ ಪ್ರಚಾರಕ್ಕಾಗಿ ಆಗಮಿಸಿದ ಸುಮಲತಾರಿಗೆ ಹೂ ಮಾಳೆ ಹಾಕಿ ಗ್ರಾಮಕ್ಕೆ ಸ್ವಾಗತ ಬಯಸಿದರು.
ಸುಮಲತಾ ಮಾತು ಆರಂಭಿಸುವಾಗ ಗುಂಪಿನಲ್ಲಿ ನಿಂತಿದ್ದ ಮಕ್ಕಳನ್ನು ನೋಡಿ ಖುಷಿಯಿಂದ ಕೆನ್ನೆ ಹಿಡಿದು ಸಂಭಾಷಣೆ ಮಾಡಿದರು.
