ಬೆಳಗಾವಿ :  ರಮೇಶ್ ಜಾರಕಿಹೊಳಿ ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಆಗಮಿಸಬೇಕು ಎಂದು ಕೇಳಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿರುವ ಬೆಂಬಲಿಗರು ಅಖಾಡಕ್ಕೆ ಇಳಿದು ಮುಂಚೂಣಿಯಲ್ಲಿರುವ  ಯುವಕರಿಗೆ ಮಾದರಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ನಿಮ್ಮ ಶಿಷ್ಯರಿಗಾಗಿ ಪ್ರಚಾರಕ್ಕೆ ಬನ್ನಿ ಎಂದು ಆಗ್ರಹಿಸಿದ್ದಾರೆ. 

ನೀವು ಬೆಳೆಸುತ್ತಿರುವ ಯುವ ನಾಯಕರ ಕೂಗು ಇದಾಗಿದ್ದು,  ಜೈ ಕಾಂಗ್ರೆಸ್, ಜೈ ರಮೇಶ್ ಅಣ್ಣಾ ಜಾರಕಿಹೊಳಿ. ನಮ್ಮ‌ ಸಾಹುಕಾರನ ನಡೆಗೆ ನಮ್ಮ ಬೆಂಬಲ, ನಮ್ಮ‌ ನಡೆ ಅಣ್ಣನ ಕಡೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಇದೀಗ ರಮೇಶ್ ಜಾರಕಿಹೊಳಿ ಫೇಸ್ ಬುಕ್ ಪೋಸ್ಟ್ ಗಳು ಎಲ್ಲೆಡೆ ವೈರಲ್ ಆಗಿವೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28