ಮಂಡ್ಯ :  ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸಂಸದರಾಗಿದ್ದಾರೆ. 

ಕೆಆರ್ ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಉಸ್ತುವಾರಿ ಸಚಿವ ಪುಟ್ಟರಾಜು, ನಿಖಿಲ್ ಆಗಮಿಸುತ್ತಿದ್ದಾರೆ. 

ಈ ವೇಳೆ  ಮಂಡ್ಯಕ್ಕೆ ಆಗಮಿಸುವ ನಿಖಿಲ್ ಅವರಿಗೆ ಸನ್ಮಾನ ಮಾಡುತ್ತಿದ್ದೇವೆ ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಹೇಳಿದ್ದಾರೆ.

‘ಮೈತ್ರಿ ಬಣದಲ್ಲಿ 20 ಅತೃಪ್ತ ಶಾಸಕರು : ಬಿಜೆಪಿಗೆ ಹೆಚ್ಚಲಿದೆ ಸಂಖ್ಯಾಬಲ’

ನಿಖಿಲ್ ಈಗಾಗಲೇ ಚುನಾವಣೆಯಲ್ಲಿ ಗೆದ್ದಾಗಿದೆ.  ಅಧಿಕೃತ ಘೋಷಣೆ ಮಾತ್ರ ಬಾಕಿ ಇದ್ದು, ಗೆಲುವಿನ ಸಂಭ್ರಮ ಆಚರಿಸುತ್ತೇವೆ. 

ನಿಖಿಲ್ ಬಂದಾಗ ಪಟಾಕಿ ಸಿಡಿಸಿ, ಗುಲಾಬಿ ಹೂವಿನ ಹಾರ ಹಾಕಿ ಸಂಭ್ರಮಿಸಲಾಗುತ್ತದೆ ಎಂದರು. 

ಈಗ ಮಾಡುವ ಸಂಭ್ರಮಾಚರಣೆ ಸಣ್ಣ ಪ್ರಮಾಣದ್ದಾಗಿದ್ದು, ಮೇ 23ರ ನಂತರದ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ನಿಖಿಲ್ ಮಂಡ್ಯ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತಾರೆ. ನಿಖಿಲ್ ಗೆಲುವಿನ ಬಗ್ಗೆ ಬೆಟ್ ಕಟ್ಟುತ್ತೇನೆ ಎಂದು ನಾರಾಯಣಗೌಡ ಸವಾಲು ಹಾಕಿದರು.