ಮಂಡ್ಯ :  ಮಂಡ್ಯ ಲೋಕಸಭಾ ಅಭ್ಯರ್ಥಿಗಳಾದ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ಜಿಲ್ಲೆಯ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ಮನೆ ಮಾಡುವುದಾಗಿ ಹೇಳಿದವರು ಅತಿಥಿಗಳಾಗಿದ್ದಾರೆ. ಚುನಾವಣೆ ಬಳಿಕ ಇತ್ತ ಸುಳಿಯದಿರುವುದಕ್ಕೆ ಆಕ್ಷೇಪಿಸಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿಯೇ ಮನೆ ಮಾಡಿ ವಾಸಿಸುವುದಾಗಿ ಹೇಳಿದವರು. ಒಂದೇ ಒಂದು ದಿನ ಆಗಮಿಸಿ ತೆರಳಿದ್ದಾರೆ. ಇಲ್ಲಿದ್ದು ಕಷ್ಟ ಸುಖ ಆಲಿಸುತ್ತೇವೆಂದವರು ಜನರ ಬಳಿ ಆಗಮಿಸಿಲ್ಲ ಎಂದಿದ್ದಾರೆ. 

ಚುನಾವಣೆ ಕಳೆದು 15 ದಿನ ಕಳೆದಿದ್ದು,  ಚುನಾವಣೆ ಬಳಿಕ ಒಂದು ದಿನವೂ ಮಂಡ್ಯದಲ್ಲಿ ವಾಸ್ತವ್ಯ ಹೂಡದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಬಾಡಿಗೆ ಮನೆ ಮಾಡಿದ್ದು, ಆದರೂ ಇಲ್ಲಿಗೆ ಬಂದಿಲ್ಲ. ಇನ್ನು ಇಲ್ಲಿಯೇ ಮನೆ ನಿರ್ಮಿಸುವುದಾಗಿ ಹೇಳಿದ್ದ ನಿಖಿಲ್ ಸುಳಿವು ಇಲ್ಲ ಎಂದಿದ್ದಾರೆ.