ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರ ವೈಖರಿಯೂ ಕೂಡ ಜೋರಾಗಿದೆ. ಇತ್ತ ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭರ್ಜರಿ ಪ್ರಚಾರದಲ್ಲಿ ತೊಡಗಿ ಗಮನ ಸೆಳೆದರು. 

ಶಿವಮೊಗ್ಗ: ಚುನಾವಣಾ ಪ್ರಚಾರದ ನಡುವೆ ಕಬಡ್ಡಿ ಆಡುವ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಇದೀಗ ಡೊಳ್ಳು ಭಾರಿಸಿ ಗಮನ ಸೆಳೆದಿದ್ದಾರೆ.

ಭಾನುವಾರ ಶಿಕಾರಿಪುರ ತಾಲೂಕಿನ ಶಿವಾಜಿ ಕಣಿಯ ಗ್ರಾಮದಲ್ಲಿ ಚುನಾವಣಾ ಪ್ರಚಾರದ ನಡುವೆ ಡೊಳ್ಳು ಬಾರಿಸಿದರು. ಈ ಮೂಲಕ ತಮ್ಮ ತಂದೆ ಎಸ್‌. ಬಂಗಾರಪ್ಪ ಅವರನ್ನು ಅನುಸರಿಸಿದರು. ಬಂಗಾರಪ್ಪ ಅವರಿಗೆ ಡೊಳ್ಳು ಬಾರಿಸುವುದೆಂದರೆ ಅತ್ಯಂತ ಖುಷಿಯ ವಿಷಯವಾಗಿತ್ತು.

ಹೀಗಾಗಿ ಅನೇಕ ಬಾರಿ ಕಲಾವಿದರ ಜೊತೆ ಸೇರಿಕೊಂಡು ಡೊಳ್ಳು ಬಾರಿಸುವ ಮೂಲಕ ತಮ್ಮೊಳಗಿದ್ದ ಕಲೆಯನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು. ಇದೀಗ ಮಧು ಬಂಗಾರಪ್ಪ ಕೂಡ ಅದೇ ರೀತಿ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.