ಬೆಂಗಳೂರು :   ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 14 ಕ್ಷೇತ್ರದಲ್ಲಿನ ಮದ್ಯದಂಗಡಿಗಳನ್ನು ಭಾನುವಾರ ಸಂಜೆ 6 ಗಂಟೆಯ ನಂತರ ಮುಚ್ಚಲಾಗಿದೆ.

ಏ.23 ರ ಮಧ್ಯರಾತ್ರಿವರೆಗೆ ಮದ್ಯದಂಗಡಿಗಳು ತೆರೆಯುವಂತಿಲ್ಲ. ಏ.24 ರ ಮುಂಜಾನೆಯಿಂದ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಬಕಾರಿ ಇಲಾಖೆಯ ಸಿಬ್ಬಂದಿಯು ಎಲ್ಲಾ 14 ಕ್ಷೇತ್ರಗಳಲ್ಲಿನ ಮದ್ಯದಂಗಡಿಗಳನ್ನು ಸೀಲ್ ಮಾಡಿದೆ. 

ಅಕ್ರಮವಾಗಿ ಮದ್ಯ ಸರಬರಾಜು ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಎದು ರಿಸಬೇಕಾಗುತ್ತದೆಂದು ಆಯೋಗ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28